ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸುವವರ ಗಮನಕ್ಕೆ
Update: 2019-08-11 10:01 IST
ಮಂಗಳೂರು, ಆ.11: ಬೆಂಗಳೂರಿನಿಂದ ಮಂಗಳೂರಿಗೆ ಬರುವವರು ಮೈಸೂರು ಮಾರ್ಗವಾಗಿ ಹುನಸೂರು, ಪೆರಿಯಾಪಟ್ಟಣ, ಸಿದ್ಧಾಪುರ, ಚತ್ತಹಳ್ಳಿ , ಮಡಿಕೇರಿ ಮಾರ್ಗವಾಗಿ ಮಂಗಳೂರಿಗೆ ಬರಬಹುದು.
ಭಾರೀ ಮಳೆ, ಪ್ರವಾಹ, ಭೂ ಕುಸಿತದಿಂದಾಗಿ ಬೆಂಗಳೂರಿ-ಮಂಗಳೂರು ಹೋಗುವ ಬಹುತೇಕ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ಚಾರ್ಮಾಡಿ ಘಾಟ್, ಶಿರಾಡಿ ಘಾಟ್, ಕುದುರೆಮುಖ ಘಾಟ್ ಹಾಗೂ ಆಗುಂಬೆ ಘಾಟ್ ರಸ್ತೆಗಳು ಬಹುತೇಕ ಬ್ಲಾಕ್ ಆಗಿದೆ. ಆದ್ದರಿಂದ ಸದ್ಯಕ್ಕೆ ಬೆಂಗಳೂರು ಕಡೆಯಿಂದ ಮಂಗಳೂರಿಗೆ ಅಥವಾ ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುವವರು ಮೈಸೂರು ಮಾರ್ಗವಾಗಿಯೂ ಬರಬಹುದು ಎಂದು 'ವಾರ್ತಾಭಾರತಿ'ಗೆ ಓದುಗರೊಬ್ಬರು ಮಾಹಿತಿ ನೀಡಿದ್ದಾರೆ.
ರವಿವಾರ ಬೆಳಗ್ಗೆ ಬೆಂಗಳೂರಿನಿಂದ ಮಂಗಳೂರಿಗೆ ಕುಟುಂಬವೊಂದು ತಲುಪಿದ್ದು ಅವರು ಈ ಮಾಹಿತಿಯನ್ನು ವಾರ್ತಾಭಾರತಿಗೆ ತಿಳಿಸಿದ್ದಾರೆ.