‘ದ್ವೇಷ ಹರಡುತ್ತಿರುವ ಅಧ್ಯಕ್ಷ ಟ್ರಂಪ್’: ರಾಷ್ಟ್ರಗೀತೆ ವೇಳೆ ಮಂಡಿಯೂರಿ ಪ್ರತಿಭಟನೆ ನಡೆಸಿದ ಒಲಿಂಪಿಕ್ ಪದಕ ವಿಜೇತ

Update: 2019-08-11 09:16 GMT
Photo: Race Imboden

ಲಿಮಾ, ಆ.11: ಪೆರುವಿನ ಲಿಮಾ ನಗರದಲ್ಲಿ ನಡೆದ ಅಮೆರಿಕನ್ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಅಮೆರಿಕದ ಫೆನ್ಸಿಂಗ್ ತಂಡದ ಆಟಗಾರರೊಬ್ಬರು ಪೋಡಿಯಂನಲ್ಲಿ ರಾಷ್ಟ್ರಗೀತೆ ಹಾಡುವ ವೇಳೆ ಮತ್ತು ಪದಕ ಪ್ರದಾನ ಸಮಾರಂಭದ ವೇಳೆ ಮಂಡಿಯೂರಿ ಕುಳಿತ ಸ್ವಾರಸ್ಯಕರ ಘಟನೆ ನಡೆದಿದೆ. ಬಳಿಕ ಟ್ವಿಟರ್‍ನಲ್ಲಿ "ನಾವು ಬದಲಾವಣೆ ತರಬೇಕಾಗಿದೆ" ಎಂದು ಅವರು ಹೇಳಿದ್ದಾರೆ.

ಒಲಿಂಪಿಕ್ ಪದಕ ವಿಜೇತ ಮತ್ತು ಅಮೆರಿಕದ ಫೋಯಿಲ್ ತಂಡದ ಸದಸ್ಯ ಹಾಗೂ ಪ್ಯಾನ್ ಅಮೆರಿಕನ್ ಗೇಮ್ಸ್‍ ನಲ್ಲಿ ಚಿನ್ನದ ಪದಕ ವಿಜೇತ ತಂಡದ ರೇಸ್ ಇಂಬೊಡೆನ್, ವರ್ಣ ನೀತಿ, ಬಂದೂಕಿನ ಮೂಲಕ ನಿಯಂತ್ರಣ, ವಲಸೆಗಾರರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದು ಮತ್ತು ಅಧ್ಯಕ್ಷರು ಕೂಡಾ ದ್ವೇಷ ಹರಡುವುದರ ಪ್ರತಿಭಟನಾರ್ಥವಾಗಿ ಹೀಗೆ ಮಾಡಿದ್ದಾಗಿ ಸಮರ್ಥಿಸಿಕೊಂಡಿದ್ದಾರೆ.

"ಈ ಸಮಸ್ಯೆ ಬಗ್ಗೆ ಗಮನ ಸೆಳೆಯುವ ಸಲುವಾಗಿ ಪೋಡಿಯಂ ತುದಿಯಲ್ಲಿ ಇರಬೇಕಾದ ಕ್ಷಣವನ್ನು ನಾನು ತ್ಯಾಗ ಮಾಡಲು ನಿರ್ಧರಿಸಿದೆ. ಇದನ್ನು ಬಗೆಹರಿಸುವ ಅಗತ್ಯವಿದೆ. ಸಬಲೀಕರಣ ಹಾಗೂ ಬದಲಾವಣೆಗಾಗಿ ವೇದಿಕೆಗಳನ್ನು ಬಳಸಿಕೊಳ್ಳುವಂತೆ ನಾನು ಇತರರನ್ನು ಉತ್ತೇಜಿಸುತ್ತೇನೆ" ಎಂದು ಹೇಳಿದ್ದಾರೆ.

ಪ್ಯಾನ್ ಅಮೆರಿಕನ್ ಗೇಮ್ಸ್‍ನಲ್ಲಿ ಇಂಬೊಡೆನ್ (26) ಪುರುಷರ ಫೋಯಿಲ್‍ ನಲ್ಲಿ ಕೆನಡಾ ಮೂಲದ ಮೆಕ್ಸಿಕನ್ ವಾನ್ ಹಾಸ್ತೆರ್ ಜತೆ ಕಂಚಿನ ಪದಕ ಗೆದ್ದರು. ಗ್ರೀಕ್ ಮಿನ್ಹಾರ್ಡ್ ಮತ್ತು ನಿಕ್ ಇಟ್ಕಿನ್ ಅವರಿದ್ದ ಚಿನ್ನದ ಪದಕ ವಿಜೇತ ತಂಡದಲ್ಲೂ ಅವರು ಇದ್ದರು. ಅವರ ಇಬ್ಬರು ಸಹ ಆಟಗಾರರು ರಾಷ್ಟ್ರಗೀತೆ ನುಡಿಸುವ ವೇಳೆ ಎದ್ದುನಿಂತರು.

ಬಂದೂಕು ಮೂಲಕ ನಿಯಂತ್ರಣ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆಗಳು ನಡೆಯುತ್ತಿರುವ ಇವರ ವಿಶಿಷ್ಟ ಪ್ರತಿಭಟನೆ ಗಮನ ಸೆಳೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News