×
Ad

ಉಚ್ಚಿಲ: ಕಡಲ್ಕೊರೆತ ಹಾನಿ ಪ್ರದೇಶಕ್ಕೆ ಯು.ಟಿ.ಖಾದರ್ ಭೇಟಿ

Update: 2019-08-11 17:30 IST

ಉಳ್ಳಾಲ: ಕಡಲ್ಕೊರೆತದಿಂದಾಗಿ ತೀವ್ರಹಾನಿಗೊಳಗಾಗಿ ಕೊಚ್ಚಿ ಹೋಗಿರುವ ಉಚ್ಚಿಲ ಬೆಟ್ಟಂಪಾಡಿ ರಸ್ತೆ ಪ್ರದೇಶಕ್ಕೆ ಹಾಗೂ ಪೆರಿಬೈಲ್ ಪ್ರದೇಶಕ್ಕೆ ಶಾಸಕ ಯು.ಟಿ.ಖಾದರ್ ಭೇಟಿ ಮಾಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರಕಾರದ ಮುಖ್ಯ ಕಾರ್ಯದರ್ಶಿ ಜತೆಗೆ ಈಗಾಗಲೇ ಚರ್ಚಿಸಲಾಗಿದ್ದು, ಶೀಘ್ರವೇ ಹಾನಿಗೊಳಗಾದ ರಸ್ತೆ ಹಾಗೂ ಮನೆಗಳಿಗೆ ಪರಿಹಾರ ವ್ಯವಸ್ಥೆ ಕಲ್ಪಿಸಲು ಪ್ರಯತ್ನ ಪಡುವುದಾಗಿ ಭರವಸೆ ನೀಡಿದರು.

ಬಳಿಕ ರಾಷ್ಟ್ರೀಯ ಹೆದ್ದಾರಿ ಉಚ್ಚಿಲ ಕಳೆದ ಹಲವಾರು ಸಮಯದಿಂದ ನೀರು ನಿಂತು, ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿತ್ತು. ಈ ಪ್ರದೇಶಕ್ಕೆ ಭೇಟಿ ನೀಡಿದ ಖಾದರ್ ಅವರು, ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಮಸ್ಯೆ ಬಗೆಹರಿಸಲು ಆದೇಶ ನೀಡಿದರು. 

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರುಗಳಾದ ಈಶ್ವರ್ ಉಳ್ಳಾಲ್, ಸುರೇಶ್ ಭಟ್ನಗರ, ದಿನೇಶ್ ಕುಂಪಲ, ವಿಶಾಲ್ ಕೊಲ್ಯ, ಸೋಮೇಶ್ವರ ಮುಖ್ಯಾಧಿಕಾರಿ ವಾಣಿ ಆಳ್ವ ಮೊದಲಾದವರು ಉಪಸ್ಥಿತರಿದ್ದರು.

ಹಾಗೆಯೇ ಮುನ್ನೂರು ಗ್ರಾಮದ ಉಳಿಯ ನೆರೆಪೀಡಿತ ಪ್ರದೇಶಗಳಿಗೆ ಯು.ಟಿ.ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News