ವಿಧಿ 370ರ ರದ್ದತಿ ಅಗತ್ಯವಾಗಿತ್ತು:ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

Update: 2019-08-11 14:26 GMT

ಚೆನ್ನೈ ಆ.11: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ವಿಧಿ 370ರ ರದ್ದತಿಯನ್ನು ರವಿವಾರ ಇಲ್ಲಿ ಬೆಂಬಲಿಸಿದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು,ರಾಷ್ಟ್ರದ ಹಿತಾಸಕ್ತಿಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಮತ್ತು ಇದನ್ನೊಂದು ರಾಜಕೀಯ ವಿಷಯವನ್ನಾಗಿ ಪರಿಗಣಿಸಕೂಡದು ಎಂದು ಹೇಳಿದರು.

ಗೃಹಸಚಿವ ಅಮಿತ್ ಶಾ ಅವರಿಂದ ತನ್ನ ಎರಡು ವರ್ಷಗಳ ಉಪರಾಷ್ಟ್ರಪತಿ ಅಧಿಕಾರಾವಧಿ ಕುರಿತು ‘ಲಿಸ್ನಿಂಗ್,ಲರ್ನಿಂಗ್ ಆ್ಯಂಡ್ ಲೀಡಿಂಗ್’ ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ವಿಧಿ 370ರ ರದ್ದತಿ ಕಾಲದ ಅಗತ್ಯವಾಗಿತ್ತು ಮತ್ತು ಶೇಷ ಭಾರತದ ಜನರು ಜಮ್ಮು-ಕಾಶ್ಮೀರದ ಜನತೆಯ ಬೆಂಬಲಕ್ಕಾಗಿ ನಿಲ್ಲಬೇಕು. 370 ರದ್ದ್ದತಿಯನ್ನು ರಾಷ್ಟ್ರದ ಹಿತಾಸಕ್ತಿಯಲ್ಲಿ,ಅದರ ಭವಿಷ್ಯಕ್ಕಾಗಿ ಮತ್ತು ಅದರ ಭದ್ರತೆ,ಸುರಕ್ಷತೆಗಾಗಿ ಮಾಡಲಾಗಿದೆ. ಸಾರ್ವಜನಿಕ ಜೀವನದಲ್ಲಿ ಸಾಕಷ್ಟು ಅನುಭವವಿರುವ ಉಪರಾಷ್ಟ್ರಪತಿಯಾಗಿ ತಾನು ಇದನ್ನು ಹೇಳಬಲ್ಲೆ ಮತ್ತು ಈಗ ಸಂಸತ್ತು ಅದನ್ನು ಒಪ್ಪಿಕೊಂಡಿದೆ. ಇದು ರಾಜಕೀಯ ವಿಷಯವಾಗಬಾರದು,ಕಾಶ್ಮೀರವು ಭಾರತದ ಅಖಂಡ ಭಾಗ ಎಂಬ ರಾಷ್ಟ್ರೀಯ ವಿಷಯವಾಗಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News