ಪ್ರವಾಹ ಪೀಡಿತರಿಗೆ ನೆರವು ಸ್ವೀಕೃತ ಕೇಂದ್ರ ಸ್ಥಾಪನೆ
ಉಡುಪಿ, ಆ.11: ಉಡುಪಿ ಜಿಲ್ಲಾಡಳಿತದ ವತಿಯಿಂದ ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳ ನಿರಾಶ್ರಿತರಿಗೆ ನೆರವು ಸ್ವೀಕರಿಸುವ ಕೇಂದ್ರವನ್ನು ಮಣಿಪಾಲ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗಿದೆ.
ಆ.15ರವರೆಗೆ ಪ್ರತಿದಿನ ಬೆಳಗ್ಗೆ 10ಗಂಟೆಯಿಂದ ಸಂಜೆ 7ಗಂಟೆಯವರೆಗೆ ಸಾರ್ವಜನಿಕರಿಂದ ಉದಾರವಾಗಿ ನೀಡುವ ನೆರವನ್ನು ಸ್ವೀಕರಿಸಲಾಗುವುದು. ಪಡಿತರ ಸಾಮಾಗ್ರಿ, ಹೊಸ ಹೊದಿಕೆ, ಬಳಸದ ಹೊಸ ಬಟ್ಟೆ, ತೂತ್ ಪೇಸ್ಟ್, ಬ್ರಷ್, ಸಾಬೂನು, ಕುಡಿಯುವ ನೀರು, ಔಷಧಿ ಕಿಟ್‌ಗಳು, ಚಾಪೆ, ದಿಂಬು, ಕ್ಯಾಂಡಲ್, ಸಾನಿಟರಿ ಪ್ಯಾಡ್‌ಗಳು, ಸೊಳ್ಳೆಬತ್ತಿ, ಸೊಳ್ಳೆ ಪರದೆ ಮತ್ತಿತರ ಸಾಮಾಗ್ರಿಗಳನ್ನು ನೀಡಬಹುದಾಗಿದೆ.
ಬಹುಬೇಗ ಕೆಟ್ಟು ಹೋಗುವ ಹಾಗೂ ಸಿದ್ಧಪಡಿಸಿದ ಸಾಮಾಗ್ರಿಗಳನ್ನು ಪೂರೈಸಬಾರದು. ಅಲ್ಲದೆ ಸ್ವಯಂ ಪ್ರೇರಣೆಯಿಂದ ನೀಡುವ ದೇಣಿಗೆಯನ್ನು ಕೂಡ ಸ್ವೀಕರಿಸಲಾಗುವುದು. ಯಾವುದೇ ಮಧ್ಯವರ್ತಿಗಳು ಜಿಲ್ಲಾಡಳಿತದ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಿ ದುರ್ಬಳಕೆ ಮಾಡುವಂತಿಲ್ಲ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0820-2574802, ರಾಮ ಮೋಹನ್ ಹೆಬ್ಬಾರ್- 9740763595, ರವಿ ಓಜನಹಳ್ಳಿ- 7411226665 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.