×
Ad

ದರೋಡೆ ಪ್ರಕರಣ: ಇಬ್ಬರ ಬಂಧನ

Update: 2019-08-11 21:43 IST

ಮಂಗಳೂರು, ಆ.11: ನಗರದ ಹೊರವಲಯದ ಬೈಕಂಪಾಡಿಯ ಕಾವೇರಿ ಫೋರ್ಡ್ ಕಂಪೆನಿಯ ರಸ್ತೆಯಲ್ಲಿ ರೂಮಿನ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ದರೋಡೆ ಮಾಡಿದ ಇಬ್ಬರು ಆರೋಪಿಗಳನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.

ಕಸಬ ಬೆಂಗ್ರೆ ತೌಹೀದ್ ಮಂಜಿಲ್ ನಿವಾಸಿ ಸರ್ಫರಾಜ್ (28) ಹಾಗೂ ಕಸಬ ಬೆಂಗ್ರೆಯ ಸೈಯದ್ ಅಫ್ರಿದ್ ಯಾನೆ ಕುಡಿಯ ಅಪ್ಪಿ(21) ಬಂಧಿತರು.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ನಂಬರ್ ಪ್ಲೇಟ್ ಇಲ್ಲದ ‘ಗ್ರೇ’ ಬಣ್ಣದ ಆಕ್ಟಿವಾ ಸ್ಕೂಟರ್, ತಲವಾರು ಮತ್ತು ಕಬ್ಬಿಣದ ರಾಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಸ್ವಾಧೀನಪಡಿಸಿದ ಒಟ್ಟು ವಸ್ತುಗಳ ಮೌಲ್ಯ 68 ಸಾವಿರ ರೂ. ಎಂದು ಅಂದಾಜಿಸಲಾಗಿದೆ.

ಪ್ರಕರಣ ವಿವರ: ಆಗಸ್ಟ್ 6 ರಂದು ಆರೋಪಿಗಳು ವ್ಯಕ್ತಿಯ ಮೊಬೈಲ್ ಹಾಗೂ ಹ್ಯಾಂಡ್ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ನಿರ್ದೇಶನದಂತೆ ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀ ಗಣೇಶ್ ಮಾರ್ಗದರ್ಶನದಲ್ಲಿ ಎಸಿಪಿ ಶ್ರೀನಿವಾಸ ಗೌಡ ನೇತೃತ್ವದಲ್ಲಿ ಪಣಂಬೂರು ಇನ್‌ಸ್ಪೆಕ್ಟರ್ ಅಜ್ಮತ್‌ಅಲಿ, ಪಿಎಸ್ಸೈ ಎಂ.ಎನ್.ಉಮೇಶ್‌ಕುಮಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News