ನೆರೆ ಸಂತ್ರಸ್ತರಿಗೆ ಬ್ಲಡ್ ಡೋನರ್ಸ್ ಸಂಸ್ಥೆಯಿಂದ ನೆರವು

Update: 2019-08-12 05:27 GMT

ಮಂಗಳೂರು, ಆ. ೧೨: ಕಳೆದ ಕೆಲವು ದಿನಗಳಿಂದ ದ.ಕ ಜಿಲ್ಲೆಯಲ್ಲಿ ಸುರಿದ ಬಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಮತ್ತು ನೆರೆ ಪೀಡಿತ ಪ್ರದೇಶದ ಜನರು ಸಂತ್ರಸ್ತಗೊಂಡಿದ್ದರು. ಇದನ್ನು ಅರಿತ ಬ್ಲಡ್ ಡೋನರ್ಸ್ ಮಂಗಳೂರು(ರಿ)ಇದರ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ ಹಾಗೂ ಕಾರ್ಯನಿರ್ವಾಹಕರಾದ ಫಾರೂಕ್ ಬಿಗ್ ಗ್ಯಾರೇಜ್ ಇವರ ನೇತೃತ್ವದಲ್ಲಿ  ಸಂತ್ರಸ್ತರಿಗಾಗಿ ದೇರಳಕಟ್ಟೆ, ಮಂಗಳೂರು, ಕಲ್ಲಡ್ಕ ಪ್ರದೇಶದ ಹಾಗೂ ಊರ ಪರವೂರ ದಾನಿಗಳಿಂದ ಸಂತ್ರಸ್ತರಿಗೆ ಅಗತ್ಯವಾದ ನೆರವನ್ನು ಬ್ಲಡ್ ಡೋನರ್ಸ್ ಮಂಗಳೂರು ತಂಡವು ಯಾಚಿಸಿತು.

ದಾನಿಗಳಿಂದ ಸಂಗ್ರಹಿಸಿದ ದೈನಂದಿನ ವಸ್ತುಗಳಾದ ಅಕ್ಕಿ,ನೀರಿನ ಬಾಟಲ್,ಔಷಧಿ, ಸೊಳ್ಳೆಬತ್ತಿ, ಮಂಕಿ ಕ್ಯಾಪ್, ಟೀ ಶರ್ಟ್, ಮಹಿಳೆಯರ  ಉಡುಪು,ಮಕ್ಕಳ ವಸ್ತ್ರ, ಬಿಸ್ಕತ್ತು,ಕ್ಯಾಂಡಲ್, ಬ್ಲಾಂಕೆಟ್,ನೈಟಿ,ಲುಂಗಿ, ಚೂಡಿದಾರ, ಟಾರ್ಚ್, ಪ್ಲಾಸ್ಟಿಕ್ ತರ್ಪಾಲು , ಹಾಗೂ ಇನ್ನಿತರ ಸಾಮಗ್ರಿಗಳನ್ನು ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಕಾರ್ಯಕರ್ತರು  ದಕ್ಷಿಣ  ಕನ್ನಡ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಾದ ಕಾಜೂರು ,ಕಿಲ್ಲೂರು ಪ್ರದೇಶಗಳಲ್ಲಿ ನೆರೆ ಸಂತ್ರಸ್ತರಿಗೆ ಪೂರೈಸಿತು.

ಕಾರ್ಯಕ್ರಮದಲ್ಲಿ ಎಸ್ಡಿಪಿಐ ಕರ್ನಾಟಕ ರಾಜ್ಯಧ್ಯಕ್ಷರಾದ ಇಲ್ಯಾಸ್ ತುಂಬೆ, ಪ್ರಧಾನ ಕಾರ್ಯದರ್ಶಿಯಾದ  ರಿಯಾಝ್ ಪರಂಗಿಪೇಟೆ , ಜಿಲ್ಲಾಧ್ಯಕ್ಷರಾದ ಅತಾವುಲ್ಲಾ ಜೋಕಟ್ಟೆ,ಉಳ್ಳಾಲ ಶಾಸಕರು ಹಾಗೂ ಮಾಜಿ ಉಸ್ತುವಾರಿ ಸಚಿವರಾದ ಯು.ಟಿ ಖಾದರ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡೀಸೋಜಾ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ವಸಂತ ಬಂಗೇರ, ಮಾಜಿ  ಸಚಿವರಾದ ಅಭಯಚಂದ್ರ ಜೈನ್, ಹಾಗೂ ಉದ್ಯಮಿ ಮೊಯಿದಿನ್ ಹಸನ್ ಮಾಡೂರು ಹಲವಾರು ನಾಯಕರು ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆ ಮಾಡುತ್ತಿರುವ ಸಮಾಜ ಸೇವೆಯನ್ನು ಮುಕ್ತವಾಗಿ ಪ್ರಶಂಸಿ ಹಾರೈಸಿದರು. ಅದೇ ರೀತಿ ಈ ಸಂದರ್ಭದಲ್ಲಿ ವೈದ್ಯಕೀಯ ತಂಡದ ನೇತೃತ್ವವನ್ನು ಸಮೀರ್ ನಾರಾವಿ ವಹಿಸಿದ್ದರು.

ಈ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಅಧ್ಯಕ್ಷರಾದ ಸಿಧ್ದೀಖ್ ಮಂಜೇಶ್ವರ, ಪ್ರಧಾನ ಕಾರ್ಯದರ್ಶಿಯಾದ ನವಾಝ್ ಕಲ್ಲರಕೋಡಿ, ಕಾರ್ಯನಿರ್ವಾಹಕರಾದ ಪಯಾಝ್ ಮೊಂಟೆಪದವು, ದಾವೂದ್ ಬಜಾಲ್, ಸಲಾಂ ಚೆಂಬುಗುಡ್ಡೆ, ಮುನೀರ್ ಚೆಂಬುಗುಡ್ಡೆ,ಫಯಾಝ್ ಮಾಡೂರು,ಆಸೀಫ್ ಉಪ್ಪಿನಂಗಡಿ,ಜಲೀಲ್ ಉಪ್ಪಿನಂಗಡಿ ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News