ಅಮೆಮಾರ್ ಮಸೀದಿ ಈದುಲ್ ಅಝ್-ಹಾ ಆಚರಣೆ
Update: 2019-08-12 12:47 IST
ಪರಂಗಿಪೇಟೆ, ಆ 12: ಬದ್ರಿಯಾ ಮದರಸ ಮತ್ತು ಜುಮ್ಮಾ ಮಸೀದಿ ಅಮೆಮಾರ್ ನಲ್ಲಿ ಈದ್ ಉಲ್ ಅಝ್-ಹಾ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಸೀದಿ ಖತೀಬ್ ಅಬ್ದುಲ್ ಲತೀಫ್ ಹನೀಫಿ ಸಂದೇಶ ನೀಡಿ ಕೆಡುಕು ಮುಕ್ತ ಸಮಾಜಕ್ಕಾಗಿ ಪ್ರಯತ್ನಿಸಲು ಕರೆ ನೀಡಿದರು. ಮಸೀದಿ ಆಡಳಿತ ಸಮಿತಿ ಅದ್ಯಕ್ಷ ಉಮರಬ್ಬ, ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್, ಸದರ್ ಮುಅಲ್ಲಿಮ್ ಮೊಹಿದ್ದೀನ್ ಅಲ್ ಹಸನಿ ಮತ್ತು ಕಮಿಟಿ ಪದಾದಿಕಾರಿಗಳು ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು