ಬಕ್ರೀದ್ ಆಚರಣೆ - ಶುಭಾಶಯ ಕೋರಿದ ಶಾಸಕ ಕಾಮತ್

Update: 2019-08-12 07:54 GMT

ಮಂಗಳೂರು, ಆ. ೧೨: ಕರಾವಳಿಯ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಪ್ರಯುಕ್ತ ಶುಭಾಶಯ ತಿಳಿಸಿದ ಮಂಗಳೂರು ದಕ್ಷಿಣ ವಿಧಾನಸಭಾ ಶಾಸಕ ಡಿ. ವೇದವ್ಯಾಸ್ ಕಾಮತ್, ಈದ್ ತ್ಯಾಗದ ಸಂಕೇತವಾಗಿದೆ. ಪ್ರೀತಿ, ಭ್ರಾತೃತ್ವ ಮತ್ತು ಮಾನವೀಯತೆಯ ಸೇವೆಯನ್ನು ಸಂಕೇತಿಸುತ್ತದೆ. ನಮ್ಮೊಳಗಿನ ಕೆಡುಕನ್ನು ತ್ಯಜಿಸಿ, ಒಳಿತಿನೆಡೆಗೆ ಮುನ್ನುಗ್ಗುವಂತಹ ತ್ಯಾಗೋಜ್ವಲವಾದ ಜೀವನ ನಡೆಸುವಂತಹ ಗುಣಗಳು ಎಲ್ಲರಲ್ಲೂ ಬೆಳೆಯಬೇಕು ಎಂದು  ಹೇಳಿದ್ದಾರೆ.

ಬಕ್ರೀದ್ ಹಬ್ಬವು ತ್ಯಾಗ - ಬಲಿದಾನ, ಧರ್ಮ, ಭಾತೃತ್ವ ಸಹೋದರತೆ, ಅನ್ಯೋನ್ಯತೆಗಳ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ನಮ್ಮ ಸಂಯೋಜಿತ ಸಂಸ್ಕೃತಿಯನ್ನು ಪ್ರತಿನಿಧಿಸುವ ಈ ಸಾರ್ವತ್ರಿಕ ಮೌಲ್ಯಗಳಿಗೆ ನಾವು ಬದ್ಧರಾಗೋಣ. ಸಮಾಜದಲ್ಲಿ ಶಾಂತಿ ಸೌಹಾರ್ದತೆಯನ್ನು ಸಾರುತ್ತಾ ಬಕ್ರೀದ್ ಹಬ್ಬದ ಸಂದೇಶವನ್ನು ಎಲ್ಲೆಡೆ ಸಾರೋಣ ಎಂದು ಶಾಸಕ  ವೇದವ್ಯಾಸ್ ಕಾಮತ್  ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News