ರಿಲಯನ್ಸ್ ತೈಲ ಉದ್ಯಮದಲ್ಲಿ ಭಾರೀ ಮೊತ್ತ ಹೂಡಿಕೆ ಮಾಡಲಿದೆ ಸೌದಿಯ ಅರಮ್ಕೊ ಕಂಪೆನಿ

Update: 2019-08-12 10:30 GMT

ಮುಂಬೈ, ಆ.12: ಸೌದಿಯ ತೈಲ ಕಂಪೆನಿಯಾದ ಅರಮ್ಕೊ, ರಿಲಯನ್ಸ್ ಇಂಡಸ್ಟ್ರೀಸ್ ತೈಲ ಸಂಸ್ಕರಣಾಗಾರ ಹಾಗೂ ರಾಸಾಯನಿಕ ವ್ಯವಹಾರಗಳಲ್ಲಿ 75 ಬಿಲಿಯನ್ ಡಾಲರ್(5.3 ಲಕ್ಷ ಕೋಟಿ ರೂ.) ಉದ್ಯಮ ಮೌಲ್ಯದ ಶೇ. 20ರಷ್ಟು ಪಾಲನ್ನು ತೆಗೆದುಕೊಳ್ಳಲು ಮುಂದಾಗಿದೆ. ರಿಲಯನ್ಸ್ ಇತಿಹಾಸದಲ್ಲಿ ವಿದೇಶಿ ಕಂಪೆನಿಯೊಂದು ಹೂಡಿಕೆ ಮಾಡುತ್ತಿರುವ ಅತ್ಯಂತ ದೊಡ್ಡ ಮೊತ್ತ ಇದಾಗಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥಾಪಕ, ಉದ್ಯಮಿ ಮುಖೇಶ್ ಅಂಬಾನಿ ಸೋಮವಾರ ನಡೆದ ಕಂಪೆನಿಯ 42ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ತಿಳಿಸಿದ್ದಾರೆ.

ವಿಶ್ವದ ಅತ್ಯಂತ ದೊಡ್ಡ ತೈಲ ಉತ್ಪಾದಕ ಸೌದಿ ಅರಮ್ಕೊ ಒಪ್ಪಂದದ ಭಾಗವಾಗಿ ಪ್ರತಿದಿನ 5 ಲಕ್ಷ ಬ್ಯಾರಲ್ ತೈಲವನ್ನು ಅಥವಾ ವರ್ಷಕ್ಕೆ 25 ದಶಲಕ್ಷ ಕಚ್ಚಾ ತೈಲವನ್ನು ರಿಲಯನ್ಸ್‌ನ ಅವಳಿ ತೈಲ ಸಂಸ್ಕರಣಾಗಾರವಿರುವ ಗುಜರಾತ್‌ನ ಜಾಮ್‌ನಗರಕ್ಕೆ ಪೂರೈಸಲಿದೆ ಎಂದು ಅಂಬಾನಿ ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News