ಮಕ್ಕಾ : ಬೈಕಂಪಾಡಿ ಮೂಲದ ಹಜ್ಜಾಜ್ ನಿಧನ

Update: 2019-08-13 12:22 GMT

ಮಂಗಳೂರು, ಆ.13: ಪ್ರಸಕ್ತ ವರ್ಷದ ಹಜ್ ಯಾತ್ರೆಗೆ ತೆರಳಿದ್ದ ಬೈಕಂಪಾಡಿ ಸಮೀಪದ ಶೇಡಿಗುರಿ ನಿವಾಸಿ ಎಂ.ಎಂ. ಬಾವ (70) ಮಂಗಳವಾರ ನಿಧನರಾಗಿದ್ದಾರೆ.

ಮೂರು ವಾರಗಳ ಹಿಂದೆಯಷ್ಟೇ ಹಜ್ ಯಾತ್ರೆಗೆ ತೆರಳಿದ್ದ ಅವರು, ಹಜ್ ಯಾತ್ರೆಯ ಭಾಗವಾದ ಸೈತಾನನಿಗೆ ಕಲ್ಲೆಸೆಯುವ ವಿಧಿಯ ಬಳಿಕ, ಸೋಮವಾರ ಅಸ್ವಸ್ಥರಾಗಿದ್ದರು. ಮಕ್ಕಾ ಕಿಂಗ್ ಫಹದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮಧ್ಯಾಹ್ನ 3:30ಕ್ಕೆ ಅವರು ಕೊನೆಯುಸಿರೆಳೆದರು.

ಇವರು ಕಳೆದ ವರ್ಷ ಹಜ್ ಯಾತ್ರೆಗೆಂದು ತೆರಳಿ ಮುಂಬೈವರೆಗೆ ಹೋಗಿದ್ದರು. ಆದರೆ, ವೀಸಾ ತಾಂತ್ರಿಕ ಸಮಸ್ಯೆಯಿಂದ ಹಜ್‌ಗೆ ಹೋಗಲಾಗದೆ ವಾಪಸಾಗಿದ್ದರು. ಇವರು ಬೈಕಂಪಾಡಿ ಜುಮಾ ಮಸೀದಿಯ ಆಡಳಿತ ಸಮಿತಿ ಸದಸ್ಯರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ಆರು ಮಂದಿ ಪುತ್ರರು, ಮೂವರು ಪುತ್ರಿಯರು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಎಂ.ಎಂ. ಬಾವಾ ಅವರ ಅಂತ್ಯಕ್ರಿಯೆ ಮಕ್ಕಾದಲ್ಲಿಯೇ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News