ಮಕ್ಕಾ : ಹಜ್ ಸೇವೆಯಲ್ಲಿ ಕೆಸಿಎಫ್ ಸ್ವಯಂ ಸೇವಕರ ತಂಡ

Update: 2019-08-13 12:26 GMT

ಮಕ್ಕಾ : ಜಗತ್ತಿನ ವಿವಿಧ ದೇಶಗಳಿಂದ ಪವಿತ್ರ ಹಜ್ ಕರ್ಮ ನಿರ್ವಹಿಸುವ ಸಲುವಾಗಿ ಸೌದಿ ಅರೇಬಿಯದ ಮಕ್ಕಾ ಹಾಗೂ ಮದೀನಾಗಳಿಗೆ ಆಗಮಿಸುವ ಯಾತ್ರಾರ್ಥಿಗಳಿಗೆ ಕನ್ನಡದ ಅನಿವಾಸಿ ಸಂಘಟನೆ ಕೆಸಿಎಫ್ ಸೇವೆಯನ್ನು ನೀಡುತ್ತಿದೆ.

ವರ್ಷಂಪ್ರತಿ 'ಹಜ್ ಯಾತ್ರಾರ್ಥಿಗಳ ಆಗಮನದಲ್ಲಿ ಹೆಚ್ಚಳವಾಗುತ್ತಿದ್ದು. ಇಂತಹ ಸಂದರ್ಭದಲ್ಲಿ ಯಾತ್ರಾರ್ಥಿಗಳ ಸಣ್ಣ ಪುಟ್ಟ ಸಮಸ್ಯೆಗಳನ್ನು ನೀಗಿಸುವ ಮೂಲಕ ಹಾಜಿಗಳ ಸೇವೆಯನ್ನು ಕಳೆದ 5 ವರ್ಷಗಳಿಂದ ಸೌದಿ ಅರೇಬಿಯಾದಾದ್ಯಂತ ನೆಲೆಸಿರುವ ಅನಿವಾಸಿ ಕನ್ನಡಿಗರ ಸಂಘಟನೆ ಕೆಸಿಎಫ್‌ನ ಕಾರ್ಯಕರ್ತರು ಮಾಡುತ್ತಿದ್ದಾರೆ.

ಈ ಬಾರಿ ಕೆಸಿಎಫ್ ಸುಮಾರು 350 ಸ್ವಯಂ ಸೇವಕರು ಫೈಝಲ್ ಕೃಷ್ಣಾಪುರ ಮತ್ತು ಇಬ್ರಾಹಿಂ ಕಿನ್ಯ ಅವರ ನೇತೃತ್ವದಲ್ಲಿ 'ದುಲ್ ಹಜ್' 9ರಿಂದ 12ರವರೆಗೆ ದಿನದ 24 ಘಂಟೆಯೂ ಸ್ವಯಂ ಸೇವೆಯಲ್ಲಿ ನಿರತರಾಗುತ್ತಾರೆ. ಮಿನಾ ಹಾಗೂ ಮಕ್ಕಾ ಪರಿಸರದಲ್ಲಿ ಸೇವೆಗೆ ಲಭ್ಯವಿದ್ದು, ಹಜ್ಜಾಜಿಗಳು ವಿಶೇಷವಾಗಿ ಕನ್ನಡಿಗ ಯಾತ್ರಿಕರು ಸ್ವಯಂಸೇವಕರ ಸೇವೆಯನ್ನು ಪಡೆದುಕೊಳ್ಳಬಹುದು ಎಂದು ಕರ್ನಾಟಕ ಕಲ್ಬರಲ್ ಫೌಂಡೇಶನ್ ಸೌದಿ ಅರೇಬಿಯದ ರಾಷ್ಟ್ರೀಯ ಅಧ್ಯಕ್ಷ ಡಿ.ಪಿ. ಯೂಸುಫ್ ಸಖಾಫಿ ಬೈತಾರ್  ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News