ನೂತನ ಮಾರುಕಟ್ಟೆ ಮಾನವೀಯ ವಿಷಯಗಳಿಗೂ ಗಮನ ನೀಡುತ್ತಿದೆ: ಡಾ. ಕಾಪು ಮುಹಮ್ಮದ್

Update: 2019-08-13 17:34 GMT

ಮಂಗಳೂರು, ಆ.13:  ನೂತನ ಮಾರುಕಟ್ಟೆ ತಾಂತ್ರಿಕ ವಿಚಾರಗಳೊಂದಿಗೆ ಮಾನವೀಯ ವಿಷಯಗಳಿಗೂ ಹೆಚ್ಚಿನ ಗಮನ ನೀಡುತ್ತಿದೆ ಮತ್ತು ಗ್ರಾಹಕ ಸಂತ್ರಪ್ತಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಯುಎಇಯ ಲಂಡನ್ ಅಮೇರಿಕಾ ಸಿಟಿ ಕಾಲೇಜಿನ ಡೀನ್ ಹಾಗೂ ಆಡಳಿತ ನಿರ್ದೇಶಕ ಡಾ. ಕಾಪು ಮುಹಮ್ಮದ್ ತಿಳಿಸಿದ್ದಾರೆ.

ನಗರದ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಸಮಕಾಲೀನ ಸಂಘ ಸಂಸ್ಥೆಗಳಲ್ಲಿ ಮಾರುಕಟ್ಟೆಯ ಹೊಸ ತಂತ್ರಗಳು, ಯೋಚನೆಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ಜಗತ್ತಿನಾದ್ಯಂತ ಮಾರುಕಟ್ಟೆ ಜಾಲ ವಿಸ್ತರಣೆಯಾಗಿರುವಂತೆ  ಮಾರುಕಟ್ಟೆಯ ತಂತ್ರಗಳು ಬದಲಾಗಿವೆ. ಇದರಿಂದಾಗಿ ಹಳೆಯ ಮಾರುಕಟ್ಟೆಯ ತಂತ್ರಗಳಿಗೂ ಹೊಸ ಮಾರುಕಟ್ಟೆ ತಂತ್ರಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಹೊಸ ಮಾರುಕಟ್ಟೆ ತಂತ್ರಜ್ಞಾನ ದಲ್ಲಿ ಸಾಕಷ್ಟು ಪ್ರಗತಿಪರ ಯೋಚನೆಗಳು ಸೇರಿಕೊಂಡಿವೆ ಎಂದರು.

ಹೊಸ ಮಾರುಕಟ್ಟೆ ತಂತ್ರಗಳಲ್ಲಿ ಸಾಮಾಜಿಕ ಹೊಣೆಗಾರಿಕೆ, ಪರಿಸರ ಸ್ನೇಹಿ ಯೋಜನೆಗಳು ಸೇರಿಕೊಂಡಿವೆ. ಗ್ರಾಹಕರನ್ನು ತಲುಪುವ ಬಗ್ಗೆ, ಮಾಹಿತಿ ಸಂಗ್ರಹ ವಿಧಾನದಲ್ಲಿ ಬದಲಾವಣೆಯಾಗುತ್ತಿದೆ. ಕನಿಷ್ಠ ಸಮಯದಲ್ಲಿ ತ್ವರಿತ ಸೇವೆ, ಗ್ರಾಹಕನಿಗೆ ಮಾರುಕಟ್ಟೆಯ ಬಗ್ಗೆ ತೃಪ್ತಿದಾಯಕ ಅನುಭವವನ್ನು ನೀಡುವ ಬಗ್ಗೆ ಗಮನ ಹರಿಸಲಾಗುತ್ತಿದೆ ಎಂದು ಕಾಪು ಮುಹಮ್ಮದ್ ತಿಳಿಸಿದ್ದಾರೆ.

ಸಮಾರಂಭದಲ್ಲಿ ಮಂಗಳೂರು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪಿ.ಬಿ.ಅಬ್ದುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಐಸಾಕ್ ವಾಝ್, ಪ್ರಶಾಂತ್ ಸಿ.ಜಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News