ಭಟ್ಕಳದಲ್ಲಿ ಅತಿವೃಷ್ಟಿಯಿಂದಾಗಿ 16.85 ಕೋಟಿ ರೂ. ಹಾನಿ: ತಹಶೀಲ್ದಾರ್ ಕೊಟ್ರಳ್ಳಿ

Update: 2019-08-13 15:27 GMT

ಭಟ್ಕಳ: ತಾಲೂಕಿನಲ್ಲಿ ಪ್ರಕೃತಿ ವಿಕೋಪದಿಂದಾಗಿ ಅಂದಾಜು ರೂ. 16.85ಕೋಟಿ ರೂ. ಹಾನಿಯಾಗಿದ್ದು ಪರಿಹಾರ ಕಾರ್ಯ ಪ್ರಗತಿಯಲ್ಲಿದೆ ಎಂದು ಭಟ್ಕಳ ತಾಲೂಕು ತಹಶೀಲ್ದಾರ್ ವಿ.ಪಿ.ಕೊಟ್ರೋಳ್ಳಿ ತಿಳಿಸಿದರು.

ಅವರು ಮಂಗಳವಾರ ತಹಶೀಲ್ದಾರ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿ ಮಾತನಾಡಿದರು.

ತಾಲೂಕಿನಲ್ಲಿ ನೆರೆಹಾವಳಿಯಿಂದಾಗಿ 97 ಮನೆಗಳು ಹಾನಿಯಾದ ಬಗ್ಗೆ ವರದಿಯಾಗಿದ್ದು ಇದರಲ್ಲಿ 82 ಮನೆಗಳಿಗೆ 18.12 ಲಕ್ಷ ರೂ. ಪರಿಹಾರ ನೀಡಲಾಗಿದೆ. ಹೆಸ್ಕಾಂ ಇಲಾಖೆಯಲ್ಲಿ 169 ವಿದ್ಯುತ್ ಕಂಬಗಳು ಹಾಗೂ 32 ಟ್ರಾನ್ಸ್ ಫಾರ್ಮರ್ ಗಳು ಬಿದ್ದಿದ್ದು 66.82ಲ. ರೂ ಹಾನಿಯಾದ ಬಗ್ಗೆ ವರದಿಯಾಗಿದೆ. ಶಿಕ್ಷಣ  ಇಲಾಖೆಯಲ್ಲಿ 40.70ಲಕ್ಷ, ಪುರಸಭೆಯಿಂದ 12.20 ಲಕ್ಷ, ಲೋಕೋಪಯೋಗಿ ಇಲಾಖೆಯಲ್ಲಿ 10.16ಲಕ್ಷ, ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 35 ಲಕ್ಷ, ಕೃಷಿ ಇಲಾಖೆಯಲ್ಲಿ 10.50ಲಕ್ಷ, ತೋಟಗಾರಿಕೆ ಇಲಾಖೆಯಲ್ಲಿ 4ಲಕ್ಷ, ಶಿಶು ಅಭಿವೃದ್ದಿ ಇಲಾಖೆಯಲ್ಲಿ 8.75 ಲಕ್ಷ, ಕಡಲ ಕೊರೆತದಿಂದ 1.30ಕೋಟಿ ರೂ., ಗ್ರಾಮೀನ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ 8.75ಲಕ್ಷ,  ನಾಮಧಾರಿ ಸಮುದಾಯ ಭವನ 2ಲಕ್ಷ, ಸಣ್ಣ ನಿರಾವರಿ ಇಲಾಖೆ 47ಲಕ್ಷ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 5ಲಕ್ಷ ಸೇರಿದಂತೆ ಒಟ್ಟು 16.85ಕೋಟಿ ರೂ ನಷ್ಟ ಸಂಭವಿಸಿದೆ ಎಂದು ತಹಶೀಲ್ದಾರ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News