ಬಡವರನ್ನು ತಿರಸ್ಕರಿಸಲಿದೆ ಟ್ರಂಪ್ ರ ನೂತನ ವೀಸಾ ನಿಯಮ!

Update: 2019-08-13 16:14 GMT

ವಾಶಿಂಗ್ಟನ್, ಆ. 13: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರಕಾರ ಸೋಮವಾರ ನೂತನ ವೀಸಾ ನಿಯಮವೊಂದನ್ನು ಅನಾವರಣಗೊಳಿಸಿದೆ. ಈ ನಿಯಮವು ತೀರಾ ಬಡವರಾಗಿರುವ ಕಾರಣಕ್ಕಾಗಿ ಲಕ್ಷಾಂತರ ಜನರಿಗೆ ವೀಸಾ ಮತ್ತು ಖಾಯಂ ವಾಸ್ತವ್ಯವನ್ನು ನಿರಾಕರಿಸಬಹುದಾಗಿದೆ.

 ತುಂಬಾ ಸಮಯದಿಂದ ನಿರೀಕ್ಷಿಸಲಾಗುತ್ತಿದ್ದ ಈ ನಿಯಮವನ್ನು ಟ್ರಂಪ್‌ರ ಪ್ರಮುಖ ವಲಸೆ ಕುರಿತ ಸಹಾಯಕ ಸ್ಟೀಫನ್ ಮಿಲ್ಲರ್ ರೂಪಿಸಿದ್ದಾರೆ. ಅದು ಅಕ್ಟೋಬರ್ 15ರಂದು ಜಾರಿಗೆ ಬರಲಿದೆ. ಅರ್ಜಿದಾರರು ವರಮಾನ ಮಾನದಂಡಗಳನ್ನು ಪೂರೈಸಲು ವಿಫಲಗೊಂಡರೆ ಅಥವಾ ನೆರವು, ಆಹಾರ ಸ್ಟಾಂಪ್ಸ್, ಸಾರ್ವಜನಿಕ ವಸತಿ ಅಥವಾ ಮೆಡಿಕೇಡ್ ಮುಂತಾದ ಸಾರ್ವಜನಿಕ ಕಾರ್ಯಕ್ರಮಗಳ ಫಲಾನುಭವಿಯಾಗಿದ್ದರೆ, ನೂತನ ನಿಯಮವು ಅವರಿಗೆ ವೀಸಾಗಳನ್ನು ನಿರಾಕರಿಸುತ್ತದೆ.

ಇಂಥ ನಿಯಮವು ವಲಸಿಗರು ‘ಸ್ವಾವಲಂಬಿಗಳಾಗಿರುವಂತೆ’ ಹಾಗೂ ತಮ್ಮ ಅಗತ್ಯಗಳನ್ನು ಪೂರೈಸಲು ಸಾರ್ವಜನಿಕ ಸಂಪನ್ಮೂಲಗಳನ್ನು ಅವಲಂಬಿಸದಂತೆ ಖಾತರಿಪಡಿಸುತ್ತದೆ ಎಂದು ಫೆಡರಲ್ ರಿಜಿಸ್ಟರ್‌ನಲ್ಲಿ ಪ್ರಕಟಗೊಂಡ ನೋಟಿಸೊಂದು ಹೇಳಿದೆ.

‘‘ಇದರ ಹಿಂದೆ ಸ್ವಾವಲಂಬನೆ ಎಂಬ ಒಂದು ಹಳೆಯ ಅಮೆರಿಕನ್ ಮೌಲ್ಯವಿದೆ’’ ಎಂದು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆಯ ಉಸ್ತುವಾರಿ ನಿರ್ದೇಶಕ ಕೆನ್ ಕಕ್ಸಿನೆಲಿ ಸೋಮವಾರ ಫಾಕ್ಸ್ ನ್ಯೂಸ್‌ನಲ್ಲಿ ಪ್ರಸಾರಗೊಂಡ ಸಂದರ್ಶನವೊಂದರಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News