​ಆ.15ರಂದು ಸ್ವಾತಂತ್ರೋತ್ಸವ ತಾಳಮದ್ದಲೆ -ತುಳು ಯಕ್ಷಗಾನ ವೈಭವ

Update: 2019-08-13 16:44 GMT

ಉಡುಪಿ, ಆ.13: ಉಡುಪಿಯ ಸುಧಾಕರ ಆಚಾರ್ಯರ ಕಲಾರಾಧನೆಯ ತ್ರಿಂಶತಿ ಆಚರಣೆ ಪ್ರಯುಕ್ತ ಸ್ವಾತಂತ್ರೋತ್ಸವ ತಾಳಮದ್ದಲೆ -ತುಳು ಯಕ್ಷಗಾನ ವೈಭವ ಕಾರ್ಯಕ್ರಮವನ್ನು ಆ.15ರಂದು ಉಡುಪಿ ಪಿಪಿಸಿ ಅಡಿಟೋರಿಯಂ ನಲ್ಲಿ ಆಯೋಜಿಸಲಾಗಿದೆ.

ಮಧ್ಯಾಹ್ನ 1:30ಕ್ಕೆ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ಅಂಬೆ ತಾಳ ಮದ್ದಲೆ ಹಾಗೂ ಸಂಜೆ 6ಗಂಟೆಗೆ ‘ತುಳುನಾಡ ಬಲಿಯೇಂದ್ರ’ ತುಳು ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಕಾರ್ಯಕ್ರಮ ಸಂಘಟಕ ಸುಧಾಕರ ಆಚಾರ್ಯ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಸಂಜೆ 5:30ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಕಟೀಲಿನ ಅರ್ಚಕ ಹರಿನಾರಾಯಣ ಅಸ್ರಣ್ಣ ಉದ್ಘಾಟಿಸಲಿರುವರು. ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ, ಶಿವಾನಂದ ಹೆಗಡೆ, ಪಳ್ಳಿ ಕಿಶನ್ ಹೆಗ್ಡೆ ಅವರನ್ನು ಸನ್ಮಾನಿಸ ಲಾಗುವುದು ಮತ್ತು ಭಾಗವತ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಮುಂಬೈ ಅವರಿಗೆ ತ್ರಿಂಶತಿ ಆಚರಣೆಯ ಕಲಾ ಗೌರವ ನೀಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಭುವನಪ್ರಸಾದ್ ಹೆಗ್ಡೆ, ಪೆರ್ಡೂರು ರತ್ನಾಕರ ಕಲ್ಯಾಣಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News