ಮಲ್ಪೆ: ದೋಣಿಯಲ್ಲಿ ಕುಸಿದು ಬಿದ್ದು ಮೃತ್ಯು

Update: 2019-08-13 16:45 GMT

ಮಲ್ಪೆ, ಆ.13: ಮೀನುಗಾರಿಕೆ ವೇಳೆ ಬೋಟಿನಲ್ಲಿ ಕುಸಿದು ಬಿದ್ದು ಮೀನು ಗಾರರೊಬ್ಬರು ಮೃತಪಟ್ಟ ಘಟನೆ ಆ.12ರಂದು ಅಪರಾಹ್ನ ವೇಳೆ ಮಲ್ಪೆ ಲೈಟ್ ಹೌಸ್ ಬಳಿಯ ಸಮುದ್ರದಲ್ಲಿ ನಡೆದಿದೆ.

ಮೃತರನ್ನು ಉದ್ಯಾವರ ಪಿತ್ರೋಡಿಯ ಗೋವರ್ಧನ ಕುಂದರ್(42) ಎಂದು ಗುರುತಿಸಲಾಗಿದೆ.

ಇವರು ಶಿವಗಿರಿ ಮೀನುಗಾರಿಕಾ ಟ್ರಾಲ್ ದೋಣಿ ಯಲ್ಲಿ ಇತರ ಮೀನುಗಾರರೊಂದಿಗೆ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದು, ಈ ವೇಳೆ ಗೋವರ್ಧನ ಕುಂದರ್ ವಾಂತಿ ಮಾಡಿ ಕುಸಿದು ಬಿದ್ದರೆ ನ್ನಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರು ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆನ್ನಲಾಗಿದೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News