ಮೋದಿ ಹಾಡುಗಳು ಸಾಮಾನ್ಯ ಜನರ ಮನ ಮುಟ್ಟುವಂತಾಗಲಿ: ಸಂಜೀವ ಮಠಂದೂರು

Update: 2019-08-14 12:03 GMT

ಪುತ್ತೂರು: ಜಗತ್ತೇ ಮೆಚ್ಚಿದ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ಚಟುವಟಿಕೆಯನ್ನು ಬಿಂಬಿಸುವ ನಿಟ್ಟಿನಲ್ಲಿ ಜಿಎಸ್‍ಬಿ ಸಮುದಾಯದ ವತಿಯಿಂದ ನಿರ್ಮಿಸಲಾದ ಪ್ರಧಾನಿ ನರೇಂದ್ರ ಮೋದಿಯವರ ಆಲ್ಬಂ ಹಾಡುಗಳು ಸಾಮಾನ್ಯ ಜನರ ಮನಮುಟ್ಟುವಂತಾಗಲಿ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಬುಧವಾರ ಪುತ್ತೂರಿನ ರೋಟರಿ ಟ್ರಸ್ಟ್ ಹಾಲ್‍ನಲ್ಲಿ ಪುತ್ತೂಉರ ಜಿಎಸ್‍ಬಿ ಮಹಿಳಾ ಮಂಡಳಿ ವತಿಯಿಂದ ದೇಶದ ಪ್ರಧಾನಿ ನರೇಂದ್ರ ಮೋದಿಯವರ `ಮೋದಿ ಆಲ್ಬಂ ಹಾಡುಗಳು' ವೀಡಿಯೋ ಕ್ಯಾಸೆಟ್ ಬಿಡುಗಡೆ ಮಾತನಾಡಿದರು.

ಹಾಡನ್ನು ಕೇಳುವುದರ ಮೂಲಕ ಮೋದಿಯ ಬಗ್ಗೆ ಎಲ್ಲರೂ ತಿಳಿದುಕೊಳ್ಳಲಿ, ಇದರಿಂದ ದೇಶ ಪ್ರೇಮ ಮೂಡಲಿ ಎಂದು ಹೇಳಿದ ಶಾಸಕರು ದೇಶದಲ್ಲಿ ಒಡೆದು ಆಳುವ ನೀತಿಯ ವಿರುದ್ಧ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆರಂಭಗೊಂಡು ಇದೀಗ ದೇಶದ ಅಭ್ಯುದಯಕ್ಕಾಗಿ ಚಿಂತಿ ಸುವ ಸಂದರ್ಭದಲ್ಲಿ ಮೋದಿಯವರ ಬಗ್ಗೆ ಹಾಡು ರಚಿಸಿ ಅಲ್ಬಂ ಮಾಡುವ ಮೂಲಕ ಜಿ.ಎಸ್.ಬಿ ಸಮುದಾಯ ಪ್ರಧಾನಿಗೆ ಕೈ ಜೋಡಿಸುವ ಕೆಲಸ ಮಾಡಿದ್ದಾರೆ. ದೇಶ ಭಕ್ತರಾಗಿ ಮುನ್ನಡೆದಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲದ ಅಧ್ಯಕ್ಷ ಜೀವಂಧರ್ ಜೈನ್, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಸುರೇಂದ್ರ ಕಿಣಿ, ಅಶೋಕ್ ಪ್ರಭು, ಜಿ.ಎಸ್.ಬಿ ಮಹಿಳಾ ಮಂಡಲದ ಕಾರ್ಯದರ್ಶಿ ಸುಲತ ವರದರಾಜ ನಾಯಕ್, ವತ್ಸಲಾ ನಾಯಕ್, ವಿಜಯರಮಾನಂದ ನಾಯಕ್, ಶೋಭಾ ಪ್ರಭು, ರಜನಿ ಪ್ರಭು, ಚೈತ್ರ ಪೈ, ನಗರಸಭಾ ಸದಸ್ಯರಾದ ಭಾಮಿ ಅಶೋಕ್ ಶೆಣೈ, ಗೌರಿ ಬನ್ನೂರು, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ರಾಮ್‍ದಾಸ್ ಹಾರಡಿ, ಉದ್ಯಮಿ ವಾಮನ್ ಪೈ, ಬಿಜೆಪಿ ಮಹಿಳಾ ಮೋರ್ಛಾದ ಪ್ರಧಾನ ಕಾರ್ಯದರ್ಶಿ ಜಯಶ್ರೀ ಎಸ್ ಶೆಟ್ಟಿ, ಅಕ್ಷಯ್ ನಾಯಕ್ ಮತ್ತಿತರು ಉಪಸ್ಥಿತರಿದ್ದರು.

ಜಿ.ಎಸ್.ಬಿ.ಮಹಿಳಾ ಮಂಡಳಿಯ ಅಧ್ಯಕ್ಷೆ ಸುಮನಾ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮೋದಿ ಆಲ್ಬಂ ಹಾಡನ್ನು ಪ್ರದರ್ಶನ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News