ಬಾಳೆಹಣ್ಣು,ಮೊಟ್ಟೆಗಳಿಗೆ ಅಧಿಕ ದರ ವಸೂಲಿ: ಹೋಟೆಲ್‌ಗಳಿಂದ ವಿವರಣೆ ಕೇಳಿದ ಕೇಂದ್ರ ಸಚಿವ

Update: 2019-08-14 14:27 GMT

ಹೊಸದಿಲ್ಲಿ, ಆ.14: ಆಹಾರ ಸಾಮಗ್ರಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಆರೋಪಗಳ ಕುರಿತು ವಿವರಣೆ ಕೇಳಿ ಸಂಬಂಧಿಸಿದ ಹೋಟೆಲ್‌ಗಳಿಗೆ ನೋಟಿಸ್ ಹೊರಡಿಸುವಂತೆ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಾಮವಿಲಾಸ್ ಪಾಸ್ವಾನ್ ಅವರು ಬುಧವಾರ ಇಲಾಖಾಧಿಕಾರಿಗಳಿಗೆ ನಿರ್ದೇಶ ನೀಡಿದ್ದರೆ.

ಇದು ಕಾನೂನು ಮಾಪನಶಾಸ್ತ್ರಕ್ಕೆ ಸಂಬಂಧಿಸಿದ ವಿಷಯವಾಗಿದೆ. ಚಂಡಿಗಡದ ಹೋಟೆಲ್‌ವೊಂದರಲ್ಲಿ ಎರಡು ಬಾಳೆಹಣ್ಣುಗಳಿಗೆ 442 ರೂ. ವಸೂಲು ಮಾಡಲಾಗಿದೆ ಎಂದು ನಟ ರಾಹುಲ್ ಬೋಸ್ ಅವರು ಜು.30ರಂದು ದೂರಿಕೊಂಡಿದ್ದರು. ಇಂತಹುದೇ ಇನ್ನೊಂದು ಘಟನೆಯಲ್ಲಿ ಗ್ರಾಹಕರೋರ್ವರು ಹೋಟೆಲ್‌ನಲ್ಲಿ ಎರಡು ಮೊಟ್ಟೆಗಳಿಗೆ 1,700 ರೂ. ದರ ವಿಧಿಸಲಾಗಿದೆ ಎಂದು ಆರೋಪಿಸಿದ್ದಾರೆ ಎಂದ ಪಾಸ್ವಾನ್,ಇದು ಅತ್ಯಂತ ಗಂಭೀರ ಮತ್ತು ಅತ್ಯಂತ ವಿಷಾದದ ವಿಷಯವಾಗಿದೆ. ಗರಿಷ್ಠ ಮಾರಾಟ ದರಕ್ಕಿಂತ ಹೆಚ್ಚು ವಸೂಲು ಮಾಡುವುದು ನಿಯಮ ಬಾಹಿರವಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News