ಭಾರತದ 73ನೇ ಸ್ವಾತಂತ್ರೋತ್ಸವ ಸಂಭ್ರಮ: ಅಶೋಕ ಚಕ್ರ ಇಮೋಜಿ ಬಿಡುಗಡೆ ಮಾಡಿದ ಟ್ವಿಟರ್

Update: 2019-08-14 16:52 GMT

 ಹೊಸದಿಲ್ಲಿ, ಆ.14: ಭಾರತದ 73ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ಅಶೋಕ ಚಕ್ರದ ಲಾಂಛನವನ್ನು (ಇಮೋಜಿ) ಬಿಡುಗಡೆ ಮಾಡಿದೆ.

ಭಾರತದ ರಾಷ್ಟ್ರಧ್ವಜದ ಮಧ್ಯೆಯಿರುವ 24 ಕಂಬಿಗಳನ್ನು ಹೊಂದಿರುವ ಅಶೋಕ ಚಕ್ರ ಭಾರತದ ಅತ್ಯುಚ್ಛ ಶಾಂತಿಕಾಲದ ಸೇನಾ ಪ್ರಶಸ್ತಿಯ ಚಿಹ್ನೆಯೂ ಆಗಿದೆ. ಆಗಸ್ಟ್ 18ರವರೆಗೆ ಸಿಗಲಿರುವ ಈ ಲಾಂಛನ ಇಂಗ್ಲಿಶ್ ಸೇರಿದಂತೆ ಹಿಂದಿ, ತಮಿಳು, ಮಲಯಾಳಂ, ಬೆಂಗಾಳಿ ಮತ್ತು ಒರಿಯ ಭಾಷೆಯಲ್ಲಿ ಲಭ್ಯವಿರಲಿದೆ. ಈ ಕುರಿತು ಮಾತನಾಡಿದ ಟ್ವಿಟರ್ ಇಂಡಿಯಾದ ಸಾರ್ವಜನಿಕ ನೀತಿ ಮತ್ತು ಸರಕಾರದ ಹಿರಿಯ ಪ್ರಬಂಧಕಿ ಶಾಗುಫ್ತಾ ಕಮ್ರಾನ್, ಕಳೆದ ಹಲವು ವರ್ಷಗಳಿಂದ ಟ್ವಿಟರ್ ಇಮೋಜಿಗಳು ನಮ್ಮ ಬಳಕೆದಾರರಿಗೆ ತಮ್ಮನ್ನು ವ್ಯಕ್ತಪಡಿಸುವ ಮಾಧ್ಯಮವಾಗಿ ರೂಪುಗೊಂಡಿದೆ. ಹಾಗಾಗಿ ಭಾರತೀಯರಿಗೆ ಅತ್ಯಂತ ಪ್ರಮುಖವಾಗಿರುವ ಕ್ಷಣಗಳ ಚಿಹ್ನೆಗಳು ಅಥವಾ ಲಾಂಛನಗಳನ್ನು ರಚಿಸಲು ನಮಗೆ ಮತ್ತಷ್ಟು ಪ್ರೇರಣೆ ದೊರೆಯುತ್ತದೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಟ್ವಿಟರ್ ಕೆಂಪು ಕೋಟೆಯ ಇಮೋಜಿಯನ್ನು ಬಿಡುಗಡೆ ಮಾಡಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News