ಕುಂದಾಪುರ: ಎನ್‌ಎಂಎ ಸೌಹಾರ್ದ ಭವನ, ಪಾಲಿ ಕ್ಲಿನಿಕ್ ಉದ್ಘಾಟನೆ

Update: 2019-08-14 16:23 GMT

ಕುಂದಾಪುರ, ಆ.14: ಕೋಡಿ ಹಾಗೂ ಆಸುಪಾಸಿನ ಬಡ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ‘ನಸೃತುಲ್ ಮಸಕೀನ್ ಅಸೋಸಿಯೇಷನ್’ ಕುಂದಾಪುರ ತಾಲೂಕಿನ ಕೋಡಿ ಗ್ರಾಮದಲ್ಲಿ 1.25 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತ ಎನ್‌ಎಂಎ ಸೌಹಾರ್ದ ಭವನ ಹಾಗೂ ಪಾಲಿಕ್ಲಿನಿಕ್‌ನ ಉದ್ಘಾಟನೆ ಆ.17ರ  ಅಪರಾಹ್ನ 2: ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಎನ್‌ಎಂಎ ಕುಂದಾಪುರ ತಾಲೂಕು ಸಮಿತಿಯ ಕೋಶಾಧಿಕಾರಿ ಅಹಮ್ಮದ್ ಯೂಸುಫ್ ತಿಳಿಸಿದ್ದಾರೆ.

ಕುಂದಾಪುರ ಪ್ರೆಸ್ ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಎಂಎ ಸಂಸ್ಥೆಯಿಂದ ವಿದ್ಯಾರ್ಥಿ ವೇತನ, ಕಡು ಬಡವರ ಮದುವೆಗಳನ್ನು ಈ ಹಿಂದೆ ಮಾಡಿಕೊಂಡು ಬಂದಿದ್ದೇವೆ. ಅದೇ ರೀತಿ ಅನಾರೋಗ್ಯದಿಂದ ಬಳಲುತ್ತಿದ್ದವರಿಗೂ ವೈದ್ಯಕೀಯ ಸಹಾಯವನ್ನು ಸಂಸ್ಥೆಯ ವತಿಯಿಂದ ಮಾಡಿದ್ದೇವೆ ಎಂದರು.

ಇದೀಗ ಇದರ ಮುಂದುವರಿದ ಭಾಗವಾಗಿ ಸಂಸ್ಥೆಯ ವತಿಯಿಂದ ಬಡಜನತೆಗೆ ವೈದ್ಯಕೀಯ ಸೌಲಭ್ಯ ಕಲ್ಪಿಸುವ ದೃಷ್ಠಿಯಿಂದ ಕೋಡಿ ಗ್ರಾಮದಲ್ಲಿ ಎಲ್ಲರ ಸಹಕಾರದೊಂದಿಗೆ ಸುಮಾರು 1.25 ಕೋಟಿ ರೂ.ವೆಚ್ಚದಲ್ಲಿ ಒಂದು ಪಾಲಿ ಕ್ಲಿನಿಕ್‌ನ್ನು ನಿರ್ಮಿಸಿದ್ದು, ಅದರ ಉದ್ಘಾಟನೆ ಆ.17ರಂದು ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಎನ್‌ಎಂಎ ಸಂಸ್ಥೆಯ ಅಧ್ಯಕ್ಷ ಸರ್ದಾರ್ ಗುಲ್ವಾಡಿ, ಸಂಚಾಲಕ ಹಾಜಿ ತಾಹಿರ್ ಹಸನ್, ಕೇಂದ್ರ ಸಮಿತಿಯ ಅಧ್ಯಕ್ಷ ಅಬೂಬಕ್ಕರ್ ಮಹಮ್ಮದ್ ಅಲಿ, ಜೊತೆ ಕಾರ್ಯದರ್ಶಿ ಅಬ್ಬುಶೇಕ್ ಸಾಹೇಬ್ ಉಪಸ್ಥಿತ ರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News