ಮುದ್ರಾ ಸಾಲ ಯೋಜನೆ ಅನುಷ್ಠಾನದಲ್ಲಿ ದ.ಕ. ಜಿಲ್ಲೆ ಪ್ರಥಮ: ನಳಿನ್ ಕುಮಾರ್ ಕಟೀಲ್

Update: 2019-08-14 17:19 GMT

ಮಂಗಳೂರು, ಆ. 14: ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆಯ ಅನುಷ್ಠಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಷ್ಟ್ರದಲ್ಲಿ ಪ್ರಥಮ ಸ್ಥಾನ ಪಡೆದಿರುವ ಬಗ್ಗೆ ಪ್ರಧಾನ ಮಂತ್ರಿ ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಯೋಜನೆ ಭಾರತ ಸರಕಾರದ ಪ್ಲ್ಯಾಗ್ ಶಿಫ್ ಯೋಜನೆಗಳು ಮತ್ತು ಆತೀ ಸಣ್ಣ, ಸಣ್ಣ ಮತ್ತು  ಮಧ್ಯಮ ಉದ್ಯಮಗಳ ಸಾಲ ಯೋಜನೆ ಬಗ್ಗೆ ಖಾಸಗಿ ಹೊಟೇಲ್ ಸಭಾಂಗಣದಲ್ಲಿಂದು ಬ್ಯಾಂಕ್ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ದ್ದೇಶಿಸಿ ಮಾತನಾಡುತ್ತಿದ್ದರು.

ಉದ್ಯಮ ಶೀಲರಿಗೆ ತತ್ವರಿತ ಸಾಲ ಮಂಜೂರಾತಿ ನೀಡುವ ಯೋಜನೆಗೆ  ಮುತುವರ್ಜಿವಹಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು. ಕಳೆದ ಆರ್ಥಿಕ ವರ್ಷದ ಅಂತ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2015ರಿಂದ 2019ರವರೆಗೆ 1,12,112 ಜನರಿಗೆ 1677.10 ಕೋಟಿ ರೂ. ಮುದ್ರಾ ಯೋಜನೆಯ ಮೂಲಕ ಸಾಲ ನೀಡಲಾಗಿದೆ. ದೇಶದ ಆರ್ಥಿಕ ಪ್ರಗತಿಗೆ ಮಹತ್ವದ ಕೊಡುಗೆ ನೀಡುತ್ತಿರುವ ಸಣ್ಣ, ಅತೀ ಸಣ್ಣ ಹಾಗೂ ಮಧ್ಯಮ ಉದ್ಯಮಿಗಳಿಗೆ ತ್ವರಿತ ಸಾಲ ನೀಡಲು ಕೇಂದ್ರ ಸರಕಾರ ದಿಂದ ಪಿಎಸ್ ಬಿ -59  ಎಂಬ ಹೊಸ ಸಾಲ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಪ್ರತಿ ಅಧಿವೇಶನಲ್ಲಿ ತಲಾ  20 ಸಂಸದರ ಸಭೆಯನ್ನು ಪ್ರಧಾನಿ ಸಭೆ ಕರೆದಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ತಿಳಿಸಿದ್ದಾರೆ.  

ಸಮಾರಂಭದಲ್ಲಿ ಶಾಸಕರಾದ ಸಂಜೀವ ಮಟಂದೂರು, ರಾಜೇಶ್ ನಾಯ್ಕ್, ವೇದ ವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಡಾ.ಭರತ್ ಶೆಟ್ಟಿ, ಸಿಂಡಿಕೇಟ್  ಬ್ಯಾಂಕ್ ಜಿ.ಎಂ. ಭಾಸ್ಕರ ಹಂದೆ, ಬ್ಯಾಂಕ್ ಆಫ್ ಬರೋಡಾ ಜಿ.ಎಂ. ನಾಗರಾಜ್, ಕೆನರಾ ಬ್ಯಾಂಕ್ ಜಿ.ಎಂ. ಯೋಗೀಶ್ ಆಚಾರ್ಯ ರಮಾಕಾಂತ ಭಟ್ ಸ್ವಾಗತಿಸಿದರು. ಸಿಂಡಿಕೇಟ್ ಬ್ಯಾಂಕ್ ಮುಖ್ಯ ಪ್ರಬಂಧಕ ರಂಜನ್  ಕೇಳ್ಕರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News