ಪುತ್ತೂರು: ನಿವೃತ್ತ ಉಪ ತಹಶೀಲ್ದಾರ್ ನಿಧನ
Update: 2019-08-14 22:53 IST
ಪುತ್ತೂರು: ಕೋಡಿಂಬಾಡಿ ಗ್ರಾಮದ ಕೋಡಿ ಮೂನಡ್ಕ ನಿವಾಸಿ ನಿವೃತ್ತ ಉಪ ತಹಶೀಲ್ದಾರ್ ಗಣಪತಿ ನಾಯಕ್ (87) ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ ನಿಧನ ಹೊಂದಿದರು.
ಕಂದಾಯ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಬಳಿಕ ಉಪ ತಹಶೀಲ್ದಾರರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ತಮ್ಮ ಸ್ವಗ್ರಾಮ ಕೋಡಿಂಬಾಡಿಯಲ್ಲಿ ಕೃಷಿ ಕಾರ್ಯದಲ್ಲಿ ನಿರತರಾಗಿದ್ದರು.
ಮೃತರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.