ಬಿಗ್ ಬಝಾರ್: ಬಿಜೈ, ಅತ್ತಾವರದಲ್ಲಿ ಮಹಾ ಬಚತ್ ಸೇಲ್

Update: 2019-08-14 17:28 GMT

ಮಂಗಳೂರು, ಆ.14: ಸ್ವಾತಂತ್ರ ದಿನದ ಅಂಗವಾಗಿ ನಗರದ ಬಿಜೈ ಮತ್ತು ಅತ್ತಾವರದ ‘ಬಿಗ್ ಬಝಾರ್’ ತನ್ನ ಗ್ರಾಹಕರಿಗಾಗಿ ವಿಶೇಷ ಮಾರಾಟ ಮೇಳವನ್ನು ಹಮ್ಮಿಕೊಂಡಿವೆ. ಆ.10ರಂದು ಆರಂಭಗೊಂಡಿರುವ ‘ಮಹಾ ಬಚತ್ ಸೇಲ್’ ಈಗ ಭರದಿಂದ ಸಾಗಿದ್ದು, ಆ.15ರಂದು ಕೊನೆಗೊಳ್ಳಲಿದೆ.

ಬಿಗ್ ಬಝಾರ್ನ ಎಲ್ಲಾ ಮಳಿಗೆಗಳಲ್ಲಿ ಆರು ದಿನಗಳ ಈ ಮಹಾ ಉಳಿತಾಯ ಮಾರಾಟ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಬಗೆಯ ದಿನ ಬಳಕೆಯ ಸಾಮಗ್ರಿಗಳು, ಬಟ್ಟೆಬರೆಗಳು, ಇಲೆಕ್ಟ್ರಾನಿಕ್ ಉತ್ಪನ್ನಗಳು ಮತ್ತು ಗೃಹ ಅಲಂಕಾರದ ವಸ್ತುಗಳ ಖರೀದಿಯ ಮೇಲೆ ಗ್ರಾಹಕರಿಗೆ ರಿಯಾಯಿತಿ ಮತ್ತು ಆಕರ್ಷಕ ಕೊಡುಗೆಗಳು ಲಭಿಸಲಿದೆ. ಪುರುಷರ ಮತ್ತು ಮಹಿಳೆಯರ ಬಟ್ಟೆಬರೆಗಳ ಖರೀದಿಗೆ ‘ಒಂದು ಕೊಂಡರೆ ಎರಡು ಉಚಿತ’, ಶೇ.20ರಷ್ಟು ಕ್ಯಾಶ್‌ಬ್ಯಾಕ್ ಸೌಲಭ್ಯವಿದೆ. ಇನ್ನು ಮೊಬೈಲ್, ಎಲ್‌ಇಡಿ ಬಲ್ಬ್ ಮತ್ತಿತರ ಗೃಹ ಬಳಕೆಯ ಸಾಮಗ್ರಿಗಳು ಕೂಡ ಅತ್ಯಂತ ಕಡಿಮೆ ಬೆಲೆ ಮತ್ತು ವಿಶೇಷ ರಿಯಾಯಿತಿಯೊಂದಿಗೆ ಗ್ರಾಹಕರಿಗೆ ಲಭ್ಯವಾಗಲಿದೆ.

3 ಸಾವಿರ ರೂ. ಮತ್ತು 6 ಸಾವಿರ ರೂ.ಗಿಂತ ಅಧಿಕ ಬೆಲೆಯ ವಸ್ತುಗಳ ಖರೀದಿಗೆ ಗ್ರಾಹಕರಿಗೆ ಕ್ರಮವಾಗಿ 1,200 ರೂ ಮತ್ತು 2,400 ರೂ.ಗಳ ಫ್ಯೂಚರ್ ವಾಲೆಟ್ಸ್ ಮತ್ತು ಪೇಟಿಎಂನ ಕ್ಯಾಶ್‌ಬ್ಯಾಕ್ ಲಭಿಸಲಿದೆ. ಅಲ್ಲದೆ ಎಸ್‌ಬಿಐ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳನ್ನು ಬಳಸಿದಲ್ಲಿ ಗ್ರಾಹಕರಿಗೆ ಹೆಚ್ಚುವರಿಯಾಗಿ ಶೇ.7ರಷ್ಟು ರಿಯಾಯಿತಿ ಲಭಿಸಲಿದೆ.

ಗ್ರಾಹಕರಿಗೆ ಒಂದೇ ಸೂರಿನಡಿ ಗೃಹೋಪಕರಣಗಳು, ದಿನನಿತ್ಯ ಬಳಕೆಯ ಸಾಮಗ್ರಿಗಳು, ಬಟ್ಟೆಬರೆ, ದಿನಸಿ ವಸ್ತುಗಳ ಸಹಿತ ಎಲ್ಲಾ ರೀತಿಯ ವಸ್ತುಗಳನ್ನು ‘ಬಿಗ್ ಬಝಾರ್’ ಮಳಿಗೆಗಳಲ್ಲಿ ಗ್ರಾಹಕರಿಗೆ ಒದಗಿಸಲಾಗುತ್ತದೆ. ಅಲ್ಲದೆ ಈ ವಸ್ತುಗಳು ಆಕರ್ಷಕ ಮತ್ತು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಮೂಲಕ ‘ಬಿಗ್ ಬಝಾರ್’ ಗ್ರಾಹಕರ ವಿಶ್ವಾಸಾರ್ಹ ಮಾರಾಟ ಮಳಿಗೆಯಾಗಿ ರೂಪುಗೊಂಡಿವೆ ಎಂದು ಕಂಪೆನಿಯ ಮುಖ್ಯನಿರ್ವಾಹಕ ಅಧಿಕಾರಿ ಸದಾಶಿವ ನಾಯಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News