ಚಾರ್ಮಾಡಿ: ನಿರಾಶ್ರಿತ ಕೇಂದ್ರ, ನೆರೆ ಪೀಡಿತ ಪ್ರದೇಶಗಳಿಗೆ ಎಸ್ಕೆಎಸ್ಸೆಸ್ಸೆಫ್ ಬೆಳ್ತಂಗಡಿ ನಾಯಕರ ಭೇಟಿ

Update: 2019-08-14 18:03 GMT

ಬೆಳ್ತಂಗಡಿ: ಎಸ್ಕೆಎಸ್ಸೆಸ್ಸೆಫ್ ಬೆಳ್ತಂಗಡಿ ವಲಯದ ನಾಯಕರು ಮತ್ತು ಕಾರ್ಯಕರ್ತರು ಉಸ್ತಾದ್ ಕಕ್ಕಿಂಜೆ ಮೂಸಾ ದಾರಿಮಿ ನೇತೃತ್ವದಲ್ಲಿ ನೆರೆಭಾದಿತ ಚಾರ್ಮಾಡಿ ಪರ್ಲಾನಿ ಪರಿಸರ ಮತ್ತು ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿರುವ ನಿರಾಶ್ರಿತ ಕೇಂದ್ರಗಳನ್ನು ಸಂದರ್ಶಿಸಿ ಸಾಂತ್ವಾನ ಹೇಳಿದರು.

ವಲಯಾಧ್ಯಕ್ಷ ನಝೀರ್ ಅಝ್ಹರಿ ಬೊಳ್ಮಿನಾರ್, ಕಾರ್ಯದರ್ಶಿ ರಿಯಾಝ್ ಫೈಝಿ, ಕೋಶಾಧಿಕಾರಿ ಶಂಸುದ್ದೀನ್ ದಾರಿಮಿ, ಜಿಲ್ಲಾ ಕಾರ್ಯದರ್ಶಿ ಶರೀಫ್ ಕಕ್ಕಿಂಜೆ, ಮುರ್ಶಿದ್ ಫೈಝಿ, ರಝಾಕ್ ಮುಸ್ಲಿಯಾರ್ ಗೇರುಕಟ್ಟೆ, ಶಕೀಲ್ ಅರೆಕ್ಕಲ್, ಇಮ್ರಾನ್ ಕಕ್ಕಿಂಜೆ, ಸದಖತುಲ್ಲಾಹ್ ದಾರಿಮಿ, ಝುಬೈರ್ ಭಂಡಸಾಲೆ , ಉಮೈರ್ ಮುಸ್ಲಿಯಾರ್, ನೌಶಾದ್ ಯಮಾನಿ, ಖಲೀಲುರ್ರಹ್ಮಾನ್, ಅದ್ದು ಕಾಕ ಚಾರ್ಮಾಡಿ, ಹಮೀದ್ ಕಟ್ಟೆ, ಅಹ್ಮದ್ ಕುಂಞಿ,  ಇಸ್ಲಾಮ್ ಬಾದ್ ಹಾಗೂ ಇತರ ಎಸ್ಕೆಎಸ್ಸೆಸ್ಸೆಫ್ ಕಾರ್ಯಕರ್ತರು, ಕಕ್ಕಿಂಜೆ ಮತ್ತು ಮಡಂತ್ಯಾರ್ ಕ್ಲಷ್ಟರಿನ ವಿಖಾಯ ಸದಸ್ಯರು ತಂಡದೊಂದಿಗೆ ನೆರೆ ಪೀಡಿತ ವಿವಿಧ ಸ್ಥಳಗಳಿಗೆ ಮತ್ತು ದೇವಸ್ಥಾನದಲ್ಲಿರುವ ನಿರಾಶ್ರಿತ ಕೇಂದ್ರಗಳಿಗೆ ಭೇಟಿ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News