‘ಋಣ ಮುಕ್ತ ಕಾಯ್ದೆ ಸೌಹಾರ್ದ ಸಹಕಾರಿಗಳಿಗೆ ಅನ್ವಯಿಸಲ್ಲ’

Update: 2019-08-16 14:12 GMT

ಉಡುಪಿ, ಆ.16: ಕರ್ನಾಟಕ ಸರಕಾರ ಘೋಷಿಸಿರುವ ಕರ್ನಾಟಕ ಋಣ ಮುಕ್ತ ಕಾಯ್ದೆ ಸೌಹಾರ್ದ ಸಹಕಾರಿಗಳಿಗೆ ಅನ್ವಯಿಸುವುದಿಲ್ಲ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಮೈಸೂರು ಪ್ರಾಂತೀಯ ನಿರ್ದೇಶಕ ಮಂಜುನಾಥ್ ಎಸ್.ಕೆ. ತಿಳಿಸಿದ್ದಾರೆ.

ಎಲ್ಲಾ ಸೌಹಾರ್ದ ಸಹಕಾರಿಗಳ ಸದಸ್ಯರುಗಳು ಪಡೆದ ಎಲ್ಲಾ ರೀತಿಯ ಸಾಲಗಳನ್ನು ಕ್ಲಪ್ತ ಸಮಯಕ್ಕೆ ಪಾವತಿಸಿ ಸಹಕಾರಿ ರಂಗದ ಅಭಿವೃದ್ಧಿಗೆ ಕೈಜೋಡಿಸಬೇಕು. ಆ ಮೂಲಕ ಸಹಕಾರಿಗಳು ತಮ್ಮ ಆರ್ಥಿಕ ಅಭಿವೃದ್ಧಿಯನ್ನು ಉನ್ನತೀಕರಣಗೊಳಿಸಬೇಕು. ಹಾಗೆಯೇ ಸೌಹಾರ್ದ ಸಹಕಾರಿಗಳು ಯಾವುದೇ ಪ್ರತ್ಯಕ್ಷ ಹಾಗೂ ಪ್ರರೋಕ್ಷ ಯಾವುದೇ ಸರಕಾರದ ಅನುದಾನವನ್ನು ಪಡೆಯುವುದಿಲ್ಲ. ಈ ಕಾಯ್ದೆ ಕೇವಲ ಲೇವಾದೇವಿಗಾರರು ಮತ್ತು ಪಾನ್ ಬ್ರೋಕರ್‌ಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಅವರು ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News