ಮೋಂತಿಮಾರ್ ಪಡ್ಪು ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Update: 2019-08-16 14:20 GMT

ವಿಟ್ಲ, ಆ.16: ಮೊಂತಿಮಾರ್ ಪಡ್ಪುವಿನ ತೌಬಾ ಜುಮಾ ಮಸ್ಜಿದ್ ಹಾಗೂ ಹಯಾತುಲ್ ಇಸ್ಲಾಂ ಮದ್ರಸದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ತೌಬಾ ಜುಮಾ ಮಸ್ಜಿದ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಸಂಪಿಲ ಧ್ವಜಾರೋಹಣ ನೆರವೇರಿಸಿದರು. ಮುಹಮ್ಮದ್ ಕುಂಞಿ ಸಖಾಫಿ ಮೊಂತಿಮಾರ್ ದುಆಗೈದರು. ಹಯಾತುಲ್ ಇಸ್ಲಾಂ ಮದ್ರಸ ಸದರ್ ಉಸ್ತಾದ್ ಇಬ್ರಾಹೀಂ ಲತೀಫಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

 ಈ ಸಂದರ್ಭ ಇಬ್ರಾಹೀಂ ಕ್ವಾರ್ಟ್ರಸ್, ಉಮರ್ ಕುಂಞಿ, ಅಬ್ದುಲ್ಲ ಎಂ., ಎಂ.ಪಿ.ಇಬ್ರಾಹೀಂ, ಮೊಹಿದಿನ್ ಕುಂಞಿ ಕ್ವಾರ್ಟ್ರಸ್, ಮೊಹಿದಿನ್ ಅರ್ಕಾಣ, ರಝಾಕ್ ಪಡ್ಪು, ಅಬ್ದುಲ್ ರಹಿಮಾನ್ ಪಡ್ಪು, ಇಬ್ರಾಹೀಂ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News