ಫಾಲ್ಸ್ ಪಾಲಾಗಿದ್ದ ಯುವಕನ ಮೃತದೇಹ ಪತ್ತೆ

Update: 2019-08-16 15:27 GMT

ಕಾರ್ಕಳ, ಆ.16: ನಿಟ್ಟೆ ಪರಪ್ಪಾಡಿಯ ಅರ್ಬಿ ಫಾಲ್ಸ್ ನಲ್ಲಿ ಸೆಲ್ಫಿ ಫೋಟೋ ತೆಗೆಯುತ್ತಿದ್ದ ವೇಳೆ ಕಾಲು ಜಾರಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದ ಸುದೇಶ್ (22) ಎಂಬವರ ಮೃತದೇಹವು ಆ.16ರಂದು ಬೆಳಗ್ಗೆ ಅಲ್ಲೇ ಸಮೀಪ ಪತ್ತೆಯಾಗಿದೆ.

ಇವರು ಆ.15 ಮಧ್ಯಾಹ್ನ ತನ್ನ ಸ್ನೇಹಿತರಾದ ರಾಕೇಶ, ಭರತ ಮತ್ತು ಸಂತೋಷ ಎಂಬವರೊಂದಿಗೆ ಫಾಲ್ಸ್‌ಗೆ ಹೋಗಿದ್ದು ಅಲ್ಲಿ ಆತನ ಸ್ನೇಹಿತ ಭರತನೊಂದಿಗೆ ಫೋಟೊ ತೆಗೆಯುವ ವೇಳೆ ಕಾಲು ಜಾರಿ ಫಾಲ್ಸ್  ನೀರಿಗೆ ಬಿದ್ದರೆನ್ನಲಾಗಿದೆ.

ಇದರಲ್ಲಿ ಭರತ್ ಈಜಿಕೊಂಡು ದಡ ಸೇರಿದ್ದು, ಸುದೇಶ್ ನಾಪತ್ತೆಯಾಗಿ ದ್ದರು. ಮೃತದೇಹದ ಪತ್ತೆಗಾಗಿ ತಡರಾತ್ರಿವರೆಗೂ ಹುಡುಕಾಟ ನಡೆಸಲಾಗಿತ್ತು.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News