ಶಾ ಫೈಸಲ್ ಬಿಡುಗಡೆಗೆ ಹಾರ್ವರ್ಡ್ ವಿವಿ ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ಕೇಂದ್ರಕ್ಕೆ ಮನವಿ

Update: 2019-08-16 16:19 GMT

ಹೊಸದಿಲ್ಲಿ, ಆ.16: ಮಾಜಿ ಐಎಎಸ್ ಅಧಿಕಾರಿ, ರಾಜಕಾರಣಿ ಮತ್ತು ಹಾರ್ವರ್ಡ್ ವಿದ್ಯಾರ್ಥಿ ಶಾ ಫೈಸಲ್ ಅವರ ಬಂಧನದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಹಾರ್ವರ್ಡ್ ವಿಶ್ವವಿದ್ಯಾನಿಲಯದ ನೂರಕ್ಕೂ ಅಧಿಕ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಹಳೆವಿದ್ಯಾರ್ಥಿಗಳು ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಈ ಕುರಿತು ನೀಡಲಾದ ಹೇಳಿಕೆಯಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿಯುತ ಮತ್ತು ಪ್ರಜಾಸ್ತತಾತ್ಮಕ ರೀತಿಯಲ್ಲಿ ಸ್ಥಿರತೆ ತರಲು ಬೆಂಬಲ ಸೂಚಿಸಲಾಗಿದ್ದು, ಕಣಿವೆ ರಾಜ್ಯದಲ್ಲಿ ಬಂಧನಲ್ಲಿರುವ ಎಲ್ಲ ರಾಜಕೀಯ ಮುಖಂಡರನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಲಾಗಿದೆ. ಶಾ ಫೈಸಲ್ ಅವರನ್ನು ಆಗಸ್ಟ್ 14ರಂದು ದಿಲ್ಲಿಯ ಇಂದಿರಾ ಗಾಂಧಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.

ಅಲ್ಲಿಂದ ಅವರನ್ನು ಕರೆದೊಯ್ದು ಆಗಸ್ಟ್ 15ರಂದು ಸಾರ್ವಜನಿಕ ಸುರಕ್ಷತೆ ಕಾಯ್ದೆ (ಪಿಎಸ್‌ಎ)ಯಡಿ ಶ್ರೀನಗರದ ಸೆಂಟೌರ್ ಹೋಟೆಲ್‌ನಲ್ಲಿ ತಾತ್ಕಾಲಿಕ ಬಂಧನ ಕೇಂದ್ರದಲ್ಲಿ ಇರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News