×
Ad

ಮಕ್ಕಾದಲ್ಲಿ ಐಎಫ್ ಎಫ್ ನಿಂದ ಸ್ವಾತಂತ್ರ್ಯ ದಿನಾಚರಣೆ

Update: 2019-08-16 22:13 IST

ಮಕ್ಕಾ : ಇಂಡಿಯನ್ ಫೆಟರ್ನಿಟಿ ಫಾರಂನ ಕರ್ನಾಟಕ ಚಾಪ್ಟರ್ ವತಿಯಿಂದ ಭಾರತ ಹಜ್ಜಾಜಿಗಳ ವಾಸಸ್ಥಳ ಮಕ್ಕಾದ ಅಝೀಝಿಯಾದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಯೂಸುಫ್ ಮಿಸ್ಭಾಯಿ ದುಆಃ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಿಎಫ್ಐ ರಾಜ್ಯಾಧ್ಯಕ್ಷ ಶಾಕೀಬ್ ಅವರು ಸಂದೇಶ ಭಾಷಣ ಮಾಡಿ, ಪ್ರಸಕ್ತ ರಾಜಕೀಯ ಭಾರತದ ಸನ್ನಿವೇಶಗಳನ್ನು ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಬೆಂಗಳೂರ್ ಮಾಹನಗರ ಪಾಲಿಕೆಯ ಸದಸ್ಯ ಮುಜಾಯಿದ್ ಪಾಷ ಮಾತನಾಡಿದರು.

ಫಾರಂನ ಅಸಿಸ್ಟೆಂಟ್ ಕೊರ್ಡಿನೆಟರ್ ಶಾಕೀರ್ ಹಕ್ ಕಾರ್ಯಕ್ರಮದ ಅಧ್ಯಕ್ಷ ವಹಿಸಿದರು ಉಬೈದುಲ್ಲಾ ಬಂಟ್ವಾಳ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News