'ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಲು ಆಗ್ರಹ'

Update: 2019-08-16 17:07 GMT

ಮಂಗಳೂರು, ಆ.16: ಎಂಆರ್‌ಪಿಎಲ್ ಸಹಿತ ಇತರ ಸಂಸ್ಥೆಯಲ್ಲಿ ಕರ್ನಾಟಕ ಮೂಲದ ಉದ್ಯೋಗಿಗಳಿಗೆ ನೇರ ನೇಮಕಾತಿಯ ಮೂಲಕ ಕಾರ್ಮಿಕ ವರ್ಗದ ನೇಮಕಾತಿಯಲ್ಲಿ ಹೆಚ್ಚಿನ ಅದ್ಯತೆ ನೀಡಬೇಕು ಎಂದು ಎಂಆರ್‌ಪಿಎಲ್ ಎಂಪ್ಲಾಯೀಸ್ ಯೂನಿಯನ್‌ನ ಅಧ್ಯಕ್ಷ ಸುಧೇಂದು ಕೆ.ವಿ. ಆಗ್ರಹಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ಹೊರತುಪಡಿಸಿ ಮತ್ತೆಲ್ಲ ಭಾರತ ಸರಕಾರದ ಅಧೀನ ಸಂಸ್ಥೆಗಳು ನೇಮಕಾತಿಯಲ್ಲಿ ಸ್ಥಳೀಯರಿಗೆ ಪ್ರಥಮ ಆದ್ಯತೆಯನ್ನು ನೀಡುತ್ತದೆ. ಹೀಗಾಗಿ ರಾಜ್ಯದ ಅಭ್ಯರ್ಥಿಗಳಿಗೆ ಎಲ್ಲೂ ಕೆಲಸ ಸಿಗದ ಪರಿಸ್ಥಿತಿ ಉದ್ಬವವಾಗಿದೆ. ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ಈ ಕುರಿತು ಸೂಕ್ತವಾದ ಕ್ರಮಗೊಳ್ಳುವ ಮೂಲಕ ಅಭ್ಯರ್ಥಿಗಳಿಗೆ ನೆರವಾಗಬೇಕು ಎಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ಸಾಯಿ ಪ್ರಥ್ವಿ ಡಿ. ಸಾಲಿಯಾನ್ ಮಾತನಾಡಿ, ಎಲ್ಲ ತರಹದ ಉದ್ಯೋಗದಲ್ಲಿ ವಿಶೇಷವಾಗಿ ‘ಸಿ’ ಹಾಗೂ ‘ಡಿ’ ದರ್ಜೆಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡುವುದು, ರಾಜಕೀಯ ನೇತಾರರು ಈ ಕುರಿತು ಸೂಕ್ತವಾದ ಮಸೂದೆಯನ್ನು ಜಾರಿಗೆ ತರಲು ಕೆಲಸ ಮಾಡುವುದು ಹಾಗೂ ರಾಜ್ಯದಲ್ಲಿ ಹೆಚ್ಚಿನ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಿ ಉದ್ಯೋಗಾಕಾಂಕ್ಷಿಗಳಿಗೆ ನಿಪುಣತೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮಂಜುನಾಥ್ ಶೆಟ್ಟಿ, ಯತೀಶ್, ಸುಕೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News