ಮೃತ ವೃದ್ಧೆಯ ಅಂತ್ಯಸಂಸ್ಕಾರ ನಡೆಸಿದ ವಿಟ್ಲ ಪೊಲೀಸರು, ಫ್ರೆಂಡ್ಸ್ ತಂಡ

Update: 2019-08-16 17:30 GMT

ಬಂಟ್ವಾಳ : ಅನಾರೋಗ್ಯದಿಂದ ಮೃತಪಟ್ಟಿದ್ದ ವೃದ್ಧೆಯ ವಾರಸುದಾರರು ಬಾರದ ಹಿನ್ನೆಲೆಯಲ್ಲಿ ಮೃತದೇಹವನ್ನು ವಿಟ್ಲ ಪೊಲೀಸರು ವಿಟ್ಲ ಫ್ರೆಂಡ್ಸ್ ತಂಡದ ಸಹಕಾರದಲ್ಲಿ ಅಂತ್ಯಕ್ರಿಯೆ ನಡೆಸಿ, ದಫನ ಮಾಡಲಾಯಿತು.

ಮೂಲತಃ ಬಳ್ಳಾರಿ ಮೂಲದ ಹಾಗೂ ಪ್ರಸ್ತುತ ವಿಟ್ಲ ಸಮೀಪದ ಇಡ್ಕಿದು ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ, ಈರಣ್ಣ ಗೌಡ ಎಂಬವರ ಪತ್ನಿ ಪಾರ್ವತಮ್ಮ ಯಾನೆ ಪದ್ಮಾವತಿ ಎಂಬವರನ್ನು ಹಲವು ವರ್ಷಗಳ ಹಿಂದೆ ಪತಿ, ಮೂವರು ಪುತ್ರರು ಮನೆಯಿಂದ ಹೊರಹಾಕಿದ್ದರು.

ಬಳಿಕ ಅಲ್ಲಿಂದ ಹೊಟ್ಟೆಪಾಡಿಗಾಗಿ ಅಲೆದಾಡುತ್ತ ವಿಟ್ಲ ಕಡೆ ಬಂದು ಇಡ್ಕಿದು ಗ್ರಾಮದ ಕೋಲ್ಪೆ ಎಂಬಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದರು. ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ಅವರು ಮೃತಪಟ್ಟಿದ್ದು,  ಮೃತದೇಹವನ್ನು ವಿಟ್ಲ ಶವಗಾರದಲ್ಲಿ ಇಡಲಾಗಿತ್ತು.

ಸಂಬಂಧಿಕರು ವಿಟ್ಲ ಪೊಲೀಸ್ ಠಾಣೆಗೆ ಬಂದು ಮೃತದೇಹ ಕೊಂಡೊಯ್ಯುವಂತೆ ಪೊಲೀಸರು ಪತ್ರಿಕಾ ಪ್ರಕಟನೆ ನೀಡಿದ್ದರು.  ಯಾರೂ ಬಾರದ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸರು ಕಾನೂನು ಪ್ರಕ್ರಿಯೆ ನಡೆಸಿದ್ದು, ಬಳಿಕ ಫ್ರೆಂಡ್ಸ್ ವಿಟ್ಲ ಸಂಘಟನೆಯ ಮುರಳೀಧರ ವಿಟ್ಲ, ಹೈದರ್ ಅಲಿ ವಿಟ್ಲ ಹಾಗೂ ಇತರ ಸದಸ್ಯರು, ಆಕೆ ಕೆಲಸ ಮಾಡುತ್ತಿದ್ದ ಮನೆ ಮಾಲಕರು, ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ದಿನೇಶ್ ಅವರ ನೇತೃತ್ವದಲ್ಲಿ ಅಂತ್ಯಕ್ರಿಯೆ ನಡೆಸಿ ದಫನ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News