ಕಲ್ಲೇಗ: ಮೌಲಾನಾ ಆಝಾದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

Update: 2019-08-16 17:56 GMT

ಪುತ್ತೂರು: ಕಲ್ಲೇಗ ಮೌಲಾನಾ ಆಝಾದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ  ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಡಾ. ವಿರೂಪಾಕ್ಷ ಅವರು ಧ್ವಜಾರೋಹಣ ಮಾಡಿದರು. ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು. ಶಿಕ್ಷಕಿ ಕುಬ್ರಾ ಸ್ವಾಗತಿಸಿದರು.

ಬಳಿಕ  ರಕ್ಷಕ ಶಿಕ್ಷಕ ಸಮಿತಿಯ ಅಧ್ಯಕ್ಷ ಇಸಾಕ್ ಸಾಲ್ಮರ ಸ್ವಾತಂತ್ರ್ಯ ದಿನಾಚರಣೆ ಕುರಿತು ಮಾತನಾಡಿ ಶುಭ ಹಾರೈಸಿದರು.

ಕಲ್ಲೇಗ  ಮ-ಅದನುಲ್ ಉಲೂಂ ಸೆಕೆಂಡರಿ ಮದ್ರಸದ ಮುಖ್ಯೋಪಾಧ್ಯಾಯರಾದ ಅಬ್ದುಲ್ ರಹಿಮಾನ್ ಯಾಮಾನಿ  ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರ ಮತ್ತು ಶಾಂತಿ ಸೌಹಾರ್ದದ ಬಗ್ಗೆ ಮಾತನಾಡಿ ಶುಭ ಹಾರೈಸಿದರು.

ಶಾಲಾ ಮುಖ್ಯೋಪಾಧ್ಯಾಯ ಡಾ. ವಿರೂಪಾಕ್ಷ ಅವರು ಮಾತನಾಡಿ, ನಮ್ಮ ದೇಶ ಕೋಮು ಗಲಭೆ, ಜಾತಿ ರಾಜಕೀಯದಿಂದಾಗಿ ತತ್ತರಿಸಿ ಹೋಗಿದ್ದು ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಸಂದರ್ಭ ನಾವೆಲ್ಲ ಎಚ್ಚೆತ್ತು ದೇಶದ ಶಾಂತಿ ಸೌಹಾರ್ದಕ್ಕಾಗಿ ಶ್ರಮಿಸಬೇಕಾಗಿದೆ ಎಂದು ಕರೆ ನೀಡಿದರು. 

ಪುತ್ತೂರು ರೇಂಜ್ ಮದ್ರಸ ಮೆನೇಜ್ಮೆಂಟ್ ಅಸೋಸಿಯೇಷನ್  ಅಧ್ಯಕ್ಷ ಹಾಜಿ ಕೆ.ಪಿ.ಝಾಕೀರ್ ಹನೀಫ್ ಈ ಸಂದರ್ಭ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಲ್ಲೇಗ ಜಮಾಅತ್ ಕಮಿಟಿಯ ಅಧ್ಯಕ್ಷ ಬಿ.ಎ.ಶಕೂರ್ ಹಾಜಿ,  ಪುತ್ತೂರಿನ ಅಲ್ಪಸಂಖ್ಯಾತ ತಾಲೂಕು ಮಾಹಿತಿ ಸಂಯೋಜಕ ನಝೀರ್, ಕಬಕ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ  ಕರಾವಳಿ ಉಮರ್, ರಕ್ಷಕ ಶಿಕ್ಷಕ ಸಮಿತಿಯ ಉಪಾಧ್ಯಕ್ಷ  ಸೋಂಪಾಡಿ ಅಬ್ದುಲ್ ಹಮೀದ್, ಪ್ರ. ಕಾರ್ಯದರ್ಶಿ ‌ ಆಶ್ರಫ್ ಕಬಕ,  ಎಸ್ಕೆಎಸ್ಸೆಸ್ಸೆಫ್ ಕಲ್ಲೇಗ ಶಾಖೆಯ ಅಧ್ಯಕ್ಷ ಡಿ.ಕೆ. ಆದಂ, ಮೂಸಾ ಕುಂಞಿ ಹಾಜಿ ಕಲ್ಲೇಗ,  ರಕ್ಷಕ ಶಿಕ್ಷಕ ಸಮಿತಿಯ ಸದಸ್ಯರಾದ ಮುಹಮ್ಮದ್ ಹನೀಫ್ ಬೊಳ್ವಾರ್, ಆಶ್ರಫ್ ಕಲ್ಲೇಗ, ಇಸ್ಮಾಯಿಲ್ ಸಿದ್ದೀಕ್, ಇಸಾಖ್ ವಿದ್ಯಾಪುರ ಕಬಕ, ಫಾರೂಖ್ ಕಲ್ಲೇಗ ಉಪಸ್ಥಿತರಿದ್ದರು.

ಅಧ್ಯಾಪಕರಾದ ಮುಹಮ್ಮದ್ ನವಾಝ್ ಕಾವಳಕಟ್ಟೆ ಹಾಗೂ ಮುಹಮ್ಮದ್ ತೌಫೀಕ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ದಿಲ್ಶಾದ್  ವಂದಿಸಿದರು.

ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News