ಮಂಗಳೂರು: ಎಂಡಿಸಿಯಿಂದ ಪೊಲೀಸ್ ಕಮಿಷನರ್ ಭೇಟಿ

Update: 2019-08-17 15:44 GMT

ಮಂಗಳೂರು, ಆ.17: ಮುಸ್ಲಿಮ್ ಡೆವಲಪ್‌ಮೆಂಟ್ ಕಮಿಟಿಯ ಮುಖಂಡರು ನೂತನ ಪೊಲೀಸ್ ಕಮಿಷನರ್ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಪ್ರಸಕ್ತ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆಸಿದರು.

ನಾಲ್ಕು ತಿಂಗಳ ಹಿಂದೆ ಮುಸ್ಲಿಮ್ ಸಮುದಾಯದ ಬೇಡಿಕೆ, ಕುಂದುಕೊರತೆ, ಸಾಮಾಜಿಕ ಮತ್ತು ಶೈಕ್ಷಣೀಕ ವಿಚಾರದಲ್ಲಿ ಬದಲಾವಣೆ ಮತ್ತಿತರ ಮಹತ್ತರವಾದ ಉದ್ದೇಶಗಳನ್ನಿಟ್ಟು ಸ್ಥಾಪಿಸಲ್ಪಟ್ಟ ಎಂಡಿಸಿ ಸಂಘಟನೆಯ ಧ್ಯೇಯಧೋರಣೆಗಳನ್ನು ನಿಯೋಗವು ಕಮಿಷನರಿಗೆ ಮನವರಿಕೆ ಮಾಡಿಕೊಟ್ಟಿತು. ಅಲ್ಲದೆ ಸೆ. 6ರಂದು ಕಂಕನಾಡಿಯ ಜಮೀಯ್ಯತುಲ್ ಫಲಾಹ್‌ನಲ್ಲಿ ನಡೆಯರುವ ಅನಾವರಣ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಳ್ಳಲು ಕಮಿಷನರ್ ಅವರನ್ನು ಮನವಿ ಮಾಡಿತು.

ಎಂಡಿಸಿ ಇದರ ಸ್ಥಾಪಕ ರಫೀಉದ್ದೀನ್ ಕುದ್ರೋಳಿ, ಅಧ್ಯಕ್ಷ ಅಮೀರ್ ತುಂಬೆ, ವಕ್ತಾರ ಝಾಕಿರ್ ಉಳ್ಳಾಲ್, ವಹಾಬ್ ಕುದ್ರೋಳಿ, ಇಮ್ತಿಯಾಝ್ ಕೋಟೇಪುರ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News