ಪ್ರವಾಸಿ ಟ್ಯಾಕ್ಸಿಗೆ ಅರ್ಜಿ ಆಹ್ವಾನ

Update: 2019-08-17 16:30 GMT

ಉಡುಪಿ, ಆ.17: ಪ್ರವಾಸೋದ್ಯಮ ಇಲಾಖೆಯಿಂದ 2019-20ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದವರಿಗೆ ಲಘುವಾಹನ ಚಾಲನಾ ಪರವಾನಗಿ ಹಾಗೂ ಚಾಲಕರ ಬ್ಯಾಡ್ಜ್ ಹೊಂದಿರುವ 20ರಿಂದ 40 ವರ್ಷ ವಯೋಮಿತಿಯೊಳಗಿನ ಎಸೆಸೆಲ್ಸಿ ತೇರ್ಗಡೆಗೊಂಡಿರುವ ನಿರುದ್ಯೋಗಿ ಯುವಕ/ಯುವತಿಯರಿಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರವಾಸಿ ವಾಹನಗಳನ್ನು ಖರೀದಿಸುವ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪ್ರವಾಸಿ ಟ್ಯಾಕ್ಸಿಗಳಿಗೆ ತಗಲುವ ಒಟ್ಟು ವೆಚ್ಚಕ್ಕೆ ಗರಿಷ್ಠ ಮೂರು ಲಕ್ಷ ರೂ. ಗಳನ್ನು ಇಲಾಖೆಯಿಂದ ಸಹಾಯಧನವಾಗಿ ನೀಡಲಾಗುವುದು. ಟ್ಯಾಕ್ಸಿಯ ಒಟ್ಟು ಮೊತ್ತದ ಮೇಲೆ ಶೇ.5ರಷ್ಟು ಅಭ್ಯರ್ಥಿ ಭರಿಸಬೇಕು. ವಾಹನದ ಉಳಿದ ಮೊತ್ತವನ್ನು ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕ್/ ಸಹಕಾರಿ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಒದಗಿಸಿ ಖರೀದಿಸಿ ವಿತರಿಸಲಾಗುವುದು.

ಅರ್ಜಿಗಳನ್ನು ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, 2ನೇ ಮಹಡಿ, ‘ಎ’ ಬ್ಲಾಕ್, ರಜತಾದ್ರಿ, ಮಣಿಪಾಲ ಕಛೇರಿ ಇವರಿಂದ ಪಡೆದು ಹಾಗೂ ಭರ್ತಿ ಮಾಡಿದ ಅರ್ಜಿಯನ್ನು ದ್ವಿ-ಪ್ರತಿಯಲ್ಲಿ ಸೀಲು ಮಾಡಿದ ಲಕೋಟೆಯೊಂದಿೆ ಸೆ.19ರೊಳಗೆ ಹಿಂದಿರುಗಿಸಬೇಕು.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0820-2574868ನ್ನು ಸಂಪರ್ಕಿ ಸುವಂತೆ ಪ್ರವಾಸೋದ್ಯಮ ಇಲಾಖೆ ಸಹಾುಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News