ವಿಪತ್ತು ನಿರ್ವಹಣಾ ತರಬೇತಿಗೆ ಅರ್ಜಿ ಆಹ್ವಾನ

Update: 2019-08-17 16:31 GMT

ಉಡುಪಿ, ಆ.17: ಭಾರತ ಸರಕಾರದ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯ ನೆಹರೂ ಯುವ ಕೇಂದ್ರ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಸಹಯೋಗದೊಂದಿಗೆ ಉಡುಪಿ ಜಿಲ್ಲೆಯ ಆಸಕ್ತ ಯುವಜನರಿಗೆ ವಿಪತ್ತು ನಿರ್ವಹಣೆಯ ತರಬೇತಿಯನ್ನು ಆಯೋಜಿಸಿದ್ದು ಜಿಲ್ಲೆಯ ಪ್ರತಿ ತಾಲೂಕು ಮಟ್ಟದಲ್ಲಿ ಸ್ವಯಂಸೇವಕರುಗಳ ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಲು ನಿರ್ಧರಿಸಲಾಗಿದೆ.

ದೇಶದಲ್ಲಿ ಪ್ರಾಯೋಜಿತ ಯೋಜನೆಯಾಗಿ 28 ರಾಜ್ಯಗಳ 32 ಜಿಲ್ಲೆಗಳ ಯುವಜನರಿಗೆ ತರಬೇತಿ ನೀಡಲು ನಿರ್ಧರಿಸಲಾಗಿದ್ದು, ಈ ಪೈಕಿ ಕರ್ನಾಟಕ ದಿಂದ ಉಡುಪಿ ಜಿಲ್ಲೆ ಆಯ್ಕೆಯಾಗಿದೆ. ವಿಪತ್ತು ನಿರ್ವಹಣಾ ತಂಡಕ್ಕಾಗಿ ಈ ವರ್ಷ ಜಿಲ್ಲೆಯ ಏಳು ತಾಲೂಕುಗಳಿಂದ ತಲಾ 30 ಯುಜನರಿಗೆ ತರಬೇತಿ ನೀಡಲಾಗುತ್ತಿದೆ.

ಆಂಧ್ರಪ್ರದೇಶ ವಿಜಯವಾಡದ 10ನೇ ಬೆಟಾಲಿಯನ್ ಎನ್‌ಡಿಆರ್‌ಎಫ್ ತರಬೇತಿ ಕೇಂದ್ರದಲ್ಲಿ ಸೆಪ್ಟೆಂಬರ್ ಮೊದಲ ವಾರದಿಂದ ತರಬೇತಿ ನಡೆಯ ಲಿದ್ದು, ಈ ತರಬೇತಿಗೆ ಆಯ್ಕೆಯಾಗುವ ಪ್ರತಿ ತಂಡಕ್ಕೆ 6 ದಿನಗಳ ತರಬೇತಿ ಇರುತ್ತದೆ. ತರಬೇತಿಗೆ ಹಾಜರಾಗುವ ಅ್ಯರ್ಥಿಗಳಿಗೆ ಪ್ರಯಾಣ ತ್ಯೆ, ಊಟ ಹಾಗೂ ವಸತಿ ವೆಚ್ಚವನ್ನು ನೆಹರು ಯುವ ಕೇಂದ್ರದಿಂದ ಭರಿಸಲಾಗುತ್ತದೆ.

ಜಿಲ್ಲೆಯ ಪ್ರತಿ ತಾಲೂಕುಗಳಿಂದ ಸ್ವಯಂಸೇವಾ ಮನೋಭಾವವುಳ್ಳ ಯುವಜನರು ಅರ್ಜಿ ಸಲ್ಲಿಸಬಹುದಾಗಿದೆ. ಮಣಿಪಾಲದ ರಜತಾದ್ರಿ ಯಲ್ಲಿರುವ ನೆಹರು ಯುವಕೇಂದ್ರದಿಂದ ಈ ತರಬೇತಿಗೆ ಆಯ್ಕೆ ಮಾಡಲಾ ಗುತ್ತದೆ. ತರಬೇತಿಯಲ್ಲಿ ಭಾಗವಹಿಸುವರು 22ರಿಂದ 29 ವರ್ಷ ವಯಸ್ಸಿನ ಯುವಕರಾಗಿದ್ದು, ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು. ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯಕರವಾಗಿದ್ದು, ಕಠಿಣ ಸಂದರ್ಭವನ್ನು ಎದುರಿಸುವ ಧೈರ್ಯಸ್ಥರಾಗಿರಬೇಕು.

ಅರ್ಜಿ ಸಲ್ಲಿಸಲು ಆ.22 ಕೊನೆಯ ದಿನವಾಗಿದ್ದು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿ ಕಛೇರಿಯಲ್ಲಿರುವ ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ವಿಲ್ಪ್ರೇಡ್ ಡಿಸೋಜರನ್ನು ಸಂಪರ್ಕಿಸಬಹುದು. ಕಚೇರಿ ದೂರವಾಣಿ ಸಂಖ್ಯೆ:0820-2574992 ಹಾಗೂ ಮೊಬೈಲ್ ಸಂಖ್ಯೆ :9958325151ಕ್ಕೆ ಕರೆ ಮಾಡುವಂತೆ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News