ಮಂಗಳೂರು: ಲೋಕಾಯುಕ್ತರಿಂದ ದೂರು ಅರ್ಜಿ ಸ್ವೀಕಾರ

Update: 2019-08-17 16:39 GMT

ಮಂಗಳೂರು, ಆ.17: ಸರಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಸರಕಾರಿ ಅಧಿಕಾರಿ/ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಿಗದಿತ ಪತ್ರದಲ್ಲಿ ಮಂಗಳೂರು ಲೋಕಾಯುಕ್ತ ವಿಭಾಗದ ಜಿಲ್ಲಾ ಅಧೀಕ್ಷಕರಿಗೆ ನೀಡಬಹುದಾಗಿದೆ.

ಆ.19ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮೂಡುಬಿದಿರೆಯ ತಹಶೀಲ್ದಾರ್ ಕಚೇರಿ, ಆ.22ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಮಂಗಳೂರು ತಹಶೀಲ್ದಾರ್‌ರ ಕಚೇರಿ, ಆ.26 ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಬಂಟ್ವಾಳ ತಾಲೂಕು ಕಚೇರಿ, ಆ.27ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಬೆಳ್ತಂಗಡಿ ತಾಲೂಕು ಕಚೇರಿ, ಆ.29ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸುಳ್ಯ ತಾಲೂಕು ಕಚೇರಿ, ಆ.30ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪುತ್ತೂರು ತಾಲೂಕು ಕಚೇರಿಗಳಲ್ಲಿ ರ್ಜಿಗಳನ್ನು ಸ್ವೀಕರಿಸಲಾಗುವುದು.

ಇದಲ್ಲದೇ ಉಳಿದ ದಿನಗಳಲ್ಲೂ ಕಚೇರಿ ವೇಳೆಯಲ್ಲಿ ಸಹ ಸಾರ್ವಜನಿಕರು ತಮ್ಮ ಅಹವಾಲು/ದೂರುಗಳನ್ನು ನೀಡಬಹುದಾಗಿದೆ. ಅರ್ಜಿದಾರರು ನಮೂನೆ 1 ಮತ್ತು 2ರಲ್ಲಿ ಭರ್ತಿ ಮಾಡಿ ನೋಟರಿಯಿಂದ ಅಫಿದಾವಿತ್ ಮಾಡಿ ಸಲ್ಲಿಸಿದ ಅರ್ಜಿಗಳನ್ನು ಈ ಕಚೇರಿಗೆ ಅಥವಾ ನೇರವಾಗಿ ನಿಬಂಧಕರು, ಕರ್ನಾಟಕ ಲೋಕಾಯುಕ್ತ, ಬಹುಮಹಡಿಗಳ ಕಟ್ಟಡ, ಡಾ.ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು-560001 ರವರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಪೊಲೀಸ್ ಅಧೀಕ್ಷಕರ ಕಚೇರಿ ದೂ.ಸಂ.: 0824- 2429197, 8861688100, 9448530051, ಪೊಲೀಸ್ ನಿರೀಕ್ಷಕರ ಕಚೇರಿ ದೂ.ಸಂ.: 0824- 2427237, 9449044377ನ್ನು ಸಂಪರ್ಕಿಸಲು ಕರ್ನಾಟಕ ಲೋಕಾಯುಕ್ತ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News