ಗ್ರಾಮಲೆಕ್ಕಾಧಿಕಾರಿಯ ಉಡಾಫೆ ವರ್ತನೆಯ ಆರೋಪ: ದೂರು

Update: 2019-08-17 17:07 GMT

ಬಂಟ್ವಾಳ: ಬಿ.ಮೂಡ ಗ್ರಾಮದ ಗ್ರಾಮಲೆಕ್ಕಾಧಿಕಾರಿಯ ಉಡಾಫೆ ವರ್ತನೆಯ ಬಗ್ಗೆ ಬಿ. ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಬಿ.ಶ್ರೀಧರ್ ಅಮೀನ್ ಬಂಟ್ವಾಳ ತಹಶೀಲ್ದಾರ್ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. 

ಇತ್ತೀಚೆಗೆ ಸುರಿದ ಭಾರಿ ಮಳೆಗೆ ಬಿ.ಮೂಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟ ತಯಾರಿಕೆಯ ಕಟ್ಟಡದ ಬದಿಯಲ್ಲಿರುವ ಆವರಣ ಗೋಡೆ ಕುಸಿದು ಬಿದ್ದಿದೆ. ಈ ಬಗ್ಗೆ ತಹಶೀಲ್ದರ್ ಹಾಗೂ ಬಿ.ಮೂಡ ಗ್ರಾಮದ ಗ್ರಾಮಾಧಿಕಾರಿಯವರ ಗಮನಕ್ಕೆ ತರಲಾಗಿದ್ದು ಶಾಲಾಭಿವೃದ್ದಿ ಸಮಿತಿಯವರ ಒತ್ತಾಯಕ್ಕೆ ಸ್ಥಳಕ್ಕೆ ಬಂದ ಗ್ರಾಮಲೆಕ್ಕಾಧಿಕಾರಿ ಕಾಟಾಚಾರಕ್ಕೆ ಬಂದವಂತೆ ವರ್ತಿಸಿದ್ದಾರೆ, ಬಿಸಿಯೂಟ ಕಟ್ಟಡ ಬಿರುಕು ಬಿಟ್ಟಿರುವುದನ್ನು ಅವರ ಗಮನಕ್ಕೆ ತಂದಾಗ ತನಗೆ ತಡವಾಗುತ್ತದೆ, ಇದರ ಪೊಟೊ ಪ್ರತಿಯೊಂದಿಗೆ ಸಂಜೆ ಭೇಟಿಯಾಗಿ ಎಂದು ವಾಪಸ್ಸು ಹೋಗಿರುತ್ತಾರೆ. ಸರಕಾರಿ ಶಾಲೆ ಉಳಿಸಬೇಕು, ಬೆಳೆಸಬೇಕು ಎಂಬ ಇರಾದೆಯಿಂದ ನಾವು ಸತತ ಪ್ರಯತ್ನ ಪಡುತ್ತಿದ್ದು ಶಾಲಾ ಬಿಸಿಯೂಟ ತಯಾರಿಕೆಯ ಕಟ್ಟಡ ಕುಸಿತವಾದರೆ ಮಕ್ಕಳಿಗೆ ಬಹಳಷ್ಟು ತೊಂದರೆಯಾಗಲಿದೆ, ಆದರೆ ಗ್ರಾಮಾಧಿಕಾರಿ ಇದನ್ನು ಅರ್ಥಮಾಡಿಕೊಳ್ಳದೆ ನಿರ್ಲಕ್ಷ ತೋರಿದ್ದಾರೆ ಎಂದು ಅವರು ದೂರಿನಲ್ಲಿ ಉಲ್ಲೇಖಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News