ಮಂಗಳೂರು ಸೆಂಟ್ರಲ್‌ನಿಂದ ‘ಉತ್ಕೃಷ್ಟ’ ರೈಲು ಬೋಗಿಗಳ ಸಂಖ್ಯೆ ಹೆಚ್ಚಳ

Update: 2019-08-18 14:44 GMT

ಮಂಗಳೂರು,ಎ.18:ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಡುವ ರೈಲಿಗೆ ಇನ್ನೊಂದು ಉತ್ಕೃಷ್ಟ ರೈಲು ಬೋಗಿ ಸೇರ್ಪಡೆಗೊಂಡು ಉತ್ಕೃಷ್ಟ ಬೋಗಿಗಳ ಸಂಖ್ಯೆ 6ಕ್ಕೆ ಏರಿದೆ. ಸೆಪ್ಟೆಂಬರ್ ತಿಂಗಳಲ್ಲಿ ಇನ್ನೆರಡು ಉತ್ಕೃಷ್ಟ ಬೋಗಿ ಸೇರ್ಪಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ರೈಲ್ವೇ ಇಲಾಖೆ ಪ್ರಕಟಣೆ ತಿಳಿಸಿದೆ.

ಮಂಗಳೂರು-ಸೆಂಟ್ರಲ್-ತಿರುವನಂತಪುರಂ -ಮಾವೇಲಿ ಎಕ್ಸ್‌ಪ್ರೆಸ್, ಮಂಗಳೂರು ಸೆಂಟ್ರಲ್-ಚೆನ್ನೈ ಮೈಲ್ ಮತ್ತು ಚೆನ್ನೈ ಸೆಂಟ್ರಲ್- ಮಂಗಳೂರು ಸೆಂಟ್ರಲ್‌ ರೈಲು ಸೇವೆಯಲ್ಲಿ ಈ ಉತ್ಕೃಷ್ಟ ಬೋಗಿಯನ್ನು ಅಳವಡಿಸಲಾಗಿದೆ. ಈ ಬೋಗಿಗಳು ರೈಲು ಪ್ರಯಾಣಿಕರಿಗೆ ಸ್ನೇಹಿಯಾದ ಕೆಲವು ಸೌಲಭ್ಯಗಳನ್ನು  ಹೊಂದಿದೆ. ಉತ್ಕೃಷ್ಟ ಬೋಗಿ ಹೊಸ ರೀತಿಯ ಬಣ್ಣಗಳಿಂದ ಕೂಡಿದ್ದು ಆಧುನಿಕ ಟಾಯಿಲೆಟ್ ಬೇಸಿನ್, ರೈಲಿನ ಬಾಗಿಲಿನ ಸಂರಚನೆ, ಕೈ ತೊಳೆಯುವ ಬೇಸಿನ್, ಲೆಡ್ ಲೈಟುಗಳು, ಡಿಜಿಟಲ್ ಗಡಿಯಾರ, ಎ.ಸಿ ಕೋಚ್‌ಗಳನ್ನು ಹೊಂದಿದೆ. ಹಾಲಿ 72ರಿಂದ 90 ಸೀಟುಗಳನ್ನು ಹೊಂದಿರುವ ರೈಲು ಬೋಗಿಗಳು ಸಂಚರಿಸುತ್ತಿವೆ ಎಂದು ರೈಲ್ವೇ ಇಲಾಖೆಯ ಪ್ರಕಟಣೆ ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News