ಖಾಸಗಿ ಡ್ರೋನ್‌ಗಳಿಗೆ ಜಿಪಿಎಸ್ ಅಳವಡಿಕೆಗೆ ಕೇಂದ್ರ ಚಿಂತನೆ

Update: 2019-08-18 15:02 GMT

ಹೊಸದಿಲ್ಲಿ, ಆ.18: ಖಾಸಗಿ ಡ್ರೋನ್‌ಗಳ ಭದ್ರತಾ ವ್ಯವಸ್ಥೆಯ ಮೇಲೆ ಅಪಾಯ ಬೀರುವುದನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ನಾಗರಿಕ ವಾಯುಯಾನ ಸಚಿವಾಲಯ ನಿರ್ಧರಿಸಿದೆ.

ಭಾರತದಲ್ಲಿ ಮಾನವರಹಿತ ವಾಯುಯಾನ ವ್ಯವಸ್ಥೆಯ ಕಾರ್ಯಾಚರಣೆಯನ್ನು ಕಾನೂನಾತ್ಮಕಗೊಳಿಸುವ ಸರಕಾರದ ಪ್ರಯತ್ನಕ್ಕೆ ಈ ರೀತಿಯ ಬೆದರಿಕೆ ದೊಡ್ಡ ಅಡಚಣೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಈ ನಿಟ್ಟಿನಲ್ಲಿ ಸರಕಾರ ಖಾಸಗಿ ಮಾಲಕತ್ವದ ಮತ್ತು ಕಾರ್ಯಾಚರಣೆಯ ಡ್ರೋನ್‌ಗಳಿಗೆ ಜಿಪಿಎಸ್ ಅಳವಡಿಸಲು ನಿರ್ಧರಿಸಿದೆ. ಆಕಾಶ ಒಂದು ವ್ಯೆಹಾತ್ಮಕ ಪ್ರದೇಶವಾಗಿದ್ದು ನಮ್ಮ ಭದ್ರತಾ ವ್ಯವಸ್ಥೆಯಲ್ಲಿ ಎಚ್ಚರಿಕೆ ವಹಿಸಲಾಗಿದೆಯೇ ಎಂಬುದನ್ನು ನಾವು ಖಾತ್ರಿಪಡಿಸಿಕೊಳ್ಳಲು ಬಯಸುತ್ತೇವೆ. ಸದ್ಯ ನಾವು ಡ್ರೋನ್‌ಗಳ ಬಳಕೆಗೆ ಸಮೀಪವಾಗುತ್ತಿದ್ದೇವೆ. ಆದರೆ ಜಗತ್ತಿನಾದ್ಯಂತ ಈ ಬೆದರಿಕೆಯ ಸಮಸ್ಯೆಇದೆ ಮತ್ತು ನಮ್ಮ ಡ್ರೋನ್‌ಗಳಲ್ಲಿ ರಿಟರ್ನ್ ಟು ಹೋಮ್ ಬಟನ್ ಇರಲಿದೆ ಎಂದು ನಾಗರಿಕ ವಾಯುಯಾನ ಸಚಿವ ಹರ್ದೀಪ್ ಪುರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಭದ್ರತಾ ಕಾಳಜಿಯನ್ನು ಹೊಂದಿರುವ ಪ್ರದೇಶಗಳ ಹೊರತಾಗಿ ಇತರೆಡೆಗಳಲ್ಲಿ ಡ್ರೋನ್‌ಗಳನ್ನು ಹಾರಿಸಲು ಚಾಲನೆ ನೀಡಲು ನಿಗದಿಯಾಗಿದ್ದ ಜನವರಿ 1, 2019ರ ದಿನಾಂಕವನ್ನು ಎರಡು ಕಾರಣಗಳಿಂದ ಮುಂದೂಡಲಾಗಿದೆ, ಒಂದು ರಾಜ್ಯಗಳು ತಮ್ಮ ಆಕಾಶಮಾರ್ಗದಲ್ಲಿ ಡ್ರೋನ್ ನಿಬರ್ಂಧಿತ ಪ್ರದೇಶಗಳನ್ನು ಇನ್ನಷ್ಟೇ ಗುರುತಿಸಬೇಕಿದೆ ಮತ್ತು ಎರಡನೆಯದಾಗಿ, ಸದ್ಯ ಡ್ರೋನ್‌ಗಳಲ್ಲಿ ಪ್ರವೇಶ ನಿಬರ್ಂಧ, ಹಾರಾಟ ನಿರ್ಬಂಧ ಮತ್ತು ಹಾರಾಟ ನಿರ್ಬಂಧಿತ ವಲಯ ಮುಂತಾದ ಕಾರ್ಯಕ್ರಮಗಳನ್ನು ಅಳವಡಿಸಲಾಗಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News