ಎಸ್ಸೆಸ್ಸೆಫ್ ದ.ಕ ಬ್ಲಡ್ ಸೈಬೋ: 100ನೇ ರಕ್ತದಾನ ಶಿಬಿರ ಸಮಾರಂಭ

Update: 2019-08-18 15:06 GMT

ಮಂಗಳೂರು, ಆ.18: ನಗರದ ಪ್ರತಿಷ್ಠಿತ ಐದು ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿ ಬ್ಲಡ್ ಸೈಬೋ ಬೃಹತ್ 100ನೇ ರಕ್ತದಾನ ಶಿಬಿರವನ್ನು ನಗರದ ಪುರಭವನದಲ್ಲಿ ರವಿವಾರ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಎಸ್ಸೆಸ್ಸೆಫ್ ನಡೆಸುವ ಈ ಮಾನವೀಯ ಸೇವೆ ಶ್ಲಾಘನೀಯ. ಇದು ಎಲ್ಲರಿಗೂ ಮಾದರಿಯಾಗಲಿದೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾಜಿ ಸಚಿವ, ಶಾಸಕ ಯು.ಟಿ. ಖಾದರ್, ಅಗ್ನಿಶಾಮಕ ದಳ ಅಧಿಕಾರಿ ಮುಹಮ್ಮದ್ ನವಾಝ್ ಝುಲ್ಫಿಕಾರ್ ಮಾತನಾಡಿದರು.

ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೌಲಾನ ಎನ್‌ಕೆಎಂ ಶಾಫಿ ಸಅದಿ ಮಾನವತಾ ಸಂದೇಶ ನೀಡಿದರು. ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಂಎಸ್‌ಎಂ ಅಬ್ದುರ್ರಶೀದ್ ಝೈನಿ ಸ್ವಾತಂತ್ರ್ಯ ಸಂದೇಶ ನೀಡಿದರು. ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಪ್ರಾಸ್ತಾವಿಕ ಭಾಷಣ ಮಾಡಿದರು.

ಎಸ್‌ವೈಎಸ್ ರಾಜ್ಯಾಧ್ಯಕ್ಷ ಜಿ.ಎಂ. ಕಾಮಿಲ್ ಸಖಾಫಿ ಸ್ವತಃ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಜಿಲ್ಲಾ ಅಧ್ಯಕ್ಷ ಇಬ್ರಾಹೀಂ ಸಖಾಫಿ ಸೆರ್ಕಳ ವಹಿಸಿದ್ದರು.

141 ಬಾರಿ ರಕ್ತದಾನ ಮಾಡಿದ ಡಾ.ಸುದೇಶ್ ಶಾಸ್ತ್ರಿ, 105 ಬಾರಿ ರಕ್ತದಾನ ಮಾಡಿದ ಸುಧಾಕರ್ ರೈ ಹಾಗೂ 53 ಬಾರಿ ರಕ್ತದಾನ ಮಾಡಿದ ಇಸ್ಮಾಯೀಲ್ ಮಾಸ್ಟರ್ ಮಂಜನಾಡಿ ಹಾಗೂ ಎಸ್ಸೆಸ್ಸೆಫ್ ಜಿಲ್ಲಾ ಬ್ಲಡ್ ಸೈಬೋ ಕನ್ವೀನರ್ ಕರೀಮ್ ಕೆದ್ಕಾರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸೈಯದ್ ಮದಕ ತಂಙಳ್, ಕೆಸಿಎಫ್ ಅಂತಾರಾಷ್ಟ್ರೀಯ ನೂತನ ಅಧ್ಯಕ್ಷ ಡಾ.ಶೇಖ್ ಬಾವ, ಮಂಗಳೂರಿನ ಕೈಸ್ತಗುರು ಫಾ.ಡೆನ್ನಿಸ್ ಪ್ರಭು, ರೆಡ್‌ಕ್ರಾಸ್ ಅಧ್ಯಕ್ಷ ಶಾಂತರಾಮ ಶೆಟ್ಟಿ, ‘ಇಶಾರ’ ಸಂಪಾದಕ ಹಮೀದ್ ಬಜ್ಪೆ, ನಾಯಕರಾದ ಅಹ್ಮದ್ ಸಖಾಫಿ ಕಾಶಿಪಟ್ನ, ಎಂ.ಎಸ್. ಮುಹಮ್ಮದ್ ವಿಟ್ಲ, ಮುಖಂಡರಾದ ಮಲ್ಲೂರು ಅಶ್ರಫ್ ಸಅದಿ, ಅಶ್ರಫ್ ಕಿನಾರ, ಹಾಫಿಳ್ ಯಾಕುಬ್ ಸಅದಿ, ಅಬ್ದುಲ್ ರಹ್ಮಾನ್ ಹಾಜಿ ಪ್ರಿಂಟೆಕ್, ಇಸ್ಮಾಯೀಲ್ ಮಾಸ್ಟರ್ ಮಂಗಳಪದವು, ಖಲೀಲ್ ಕಾವೂರು, ಸೈಯದ್ ಶಿಹಾಬ್ ತಂಙಳ್ ಕಿನ್ಯ, ಶರೀಫ್ ನಂದಾವರ, ಕೊಂಬಾಳಿ ಝುಹ್ರಿ, ಶಾಕಿರ್ ಹಾಜಿ ಮಿತ್ತೂರು, ಮುಸ್ತಫಾ ಮಾಸ್ಟರ್ ಉಳ್ಳಾಲ ಮುಂತಾದವರು ಉಪಸ್ಥಿತರಿದ್ದರು.

100ನೇ ಕ್ಯಾಂಪ್‌ನಲ್ಲಿ 505 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಇಲ್ಲಿಯವರೆಗಿನ ಒಟ್ಟು 100 ಕ್ಯಾಂಪ್‌ಗಳ ಮೂಲಕ 7,100 ಯುನಿಟ್ ರಕ್ತವನ್ನು ಪಡೆದು ರೋಗಿಗಳಿಗೆ ವಿತರಿಸಿದ ವರದಿ ಪ್ರಕಟಿಸಲಾಯಿತು

ಸ್ವಾಗತ ಸಮಿತಿ ಚೇರ್‌ಮನ್ ಅಬ್ದುರ್ರಶೀದ್ ಹಾಜಿ ವಗ್ಗ ಸ್ವಾಗತಿಸಿದರು. ತೌಸೀಫ್ ಸಅದಿ ಹರೇಕಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News