ಮನೆಗೆ ನುಗ್ಗಿ ರಿವಾಲ್ವರ್ ಸಹಿತ ಸೊತ್ತು ಕಳವು

Update: 2019-08-18 16:03 GMT

ಕಾರ್ಕಳ, ಆ.18: ಸಾಣೂರು ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಪಿಸ್ತೂಲ್ ಸಹಿತ ಚಿನ್ನಾಭರಣಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಈ ಕಳವು ಪ್ರಕರಣ ಆ.8ರಿಂದ ಆ.16ರ ಮಧ್ಯಾವಧಿಯಲ್ಲಿ ನಡೆದಿದೆ ಎನ್ನಲಾಗಿದೆ. ಅನಿತಾ ಕಾಮತ್ ಎಂಬವರ ಮನೆಯ ಹಿಂಬದಿಯ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು, ಮನೆಯ ಒಳಗಡೆ ಇದ್ದ ಬಂಗಾರ, ಬೆಳ್ಳಿಯ ಸೊತ್ತು ಹಾಗೂ ರಿವಾಲ್ವರ್‌ನ್ನು ಕಳವು ಮಾಡಿರುವುದಾಗಿ ತಿಳಿದುಬಂದಿದೆ. ಇವುಗಳ ಒಟ್ಟು ಮೌಲ್ಯ 3,02,000ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News