ದೇಶದಲ್ಲಿ ಆರ್ಥಿಕ ತುರ್ತುಪರಿಸ್ಥಿತಿಯ ಸನ್ನಿವೇಶ : ಕಾಂಗ್ರೆಸ್

Update: 2019-08-18 16:08 GMT

ಹೊಸದಿಲ್ಲಿ, ಆ.19: ದೇಶದ ಆರ್ಥಿಕತೆಯ ಮಂದಗತಿ ಅತ್ಯಂತ ಕಳವಳಕಾರಿಯಾಗಿದ್ದು ದೇಶದಲ್ಲಿ ಆರ್ಥಿಕ ತುರ್ತುಪರಿಸ್ಥಿತಿಯ ಸನ್ನಿವೇಶವಿದೆ ಎಂದು ಕಾಂಗ್ರೆಸ್ ಹೇಳಿದೆ.

 ಬಿಜೆಪಿಯು ತನ್ನ ವೈಫಲ್ಯವನ್ನು ಮರೆಮಾಚಲು ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ದೂರಿದ್ದಾರೆ. ಆಟೊಮೊಬೈಲ್ ಕ್ಷೇತ್ರದಲ್ಲಿ ಮಂದಗತಿಯ ಪ್ರವೃತ್ತಿ ಏಕಾಏಕಿ ಸಂಭವಿಸಿದ್ದಲ್ಲ. ಆಟೊಮೊಬೈಲ್ ಕ್ಷೇತ್ರದಲ್ಲಿ ಶೇ.31ರಷ್ಟು ಮಾರಾಟ ಇಳಿಕೆಯಾಗಿದ್ದು ಕಳೆದ 13 ತಿಂಗಳಿನಿಂದ ಈ ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ. ವಿಶ್ವದ ನಾಲ್ಕನೇ ಬೃಹತ್ ಆಟೊಮೊಬೈಲ್ ಮಾರುಕಟ್ಟೆಯಾಗಿರುವ ಭಾರತದಲ್ಲಿ 2018ರ ಬಳಿಕ 12 ಬಾರಿ ಮಾರಾಟ ಕುಸಿದಿದೆ.

ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಕುಸಿತ, ವಿತ್ತೀಯ ಕೊರತೆಯ ಹೆಚ್ಚಳ, ಕುಸಿಯುತ್ತಿರುವ ಜಿಡಿಪಿ, ರೂಪಾಯಿ ವೌಲ್ಯದಲ್ಲಿ ನಿರಂತರ ಕುಸಿತ, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹಿಂಜರಿತ, ವಿದೇಶಿ ನೇರ ಹೂಡಿಕೆಯಲ್ಲಿ ಕುಸಿತ ಇವೆಲ್ಲಾ ಆತಂಕಕ್ಕೆ ಕಾರಣವಾಗಿದೆ. ಮೋದಿ ಸರಕಾರದ ಪ್ರಥಮ ಮತ್ತು ಎರಡನೇ ಅವಧಿಯನ್ನು ಗಮನಿಸಿದರೆ ಪ್ರಗತಿಯ ದರ ಕುಂಟಿತವಾಗುತ್ತಾ ಹೋಗುತ್ತಿರುವುದನ್ನು ಗಮನಿಸಬಹುದಾಗಿದೆ ಎಂದು ಸಿಂಘ್ವಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News