ಅಮೆರಿಕ ಕ್ಷಿಪಣಿ ನಿಯೋಜಿಸದ ಹೊರತು ನಮ್ಮದೂ ಇಲ್ಲ: ರಶ್ಯ

Update: 2019-08-18 16:54 GMT

ಮಾಸ್ಕೋ, ಆ. 18: ಅಮೆರಿಕವು ಯುರೋಪ್ ಮತ್ತು ಏಶ್ಯದಲ್ಲಿ ಎಲ್ಲಿಯವರೆಗೆ ಹೊಸ ಕ್ಷಿಪಣಿಗಳನ್ನು ನಿಯೋಜಿಸುವುದಿಲ್ಲವೋ ಅಲ್ಲಿಯವರೆಗೆ ರಶ್ಯವೂ ಕ್ಷಿಪಣಿಗಳನ್ನು ನಿಯೋಜಿಸುವುದಿಲ್ಲ ಎಂದು ರಶ್ಯದ ರಕ್ಷಣಾ ಸಚಿವ ಸರ್ಗೀ ಶೊಯಿಗು ರವಿವಾರ ಹೇಳಿದ್ದಾರೆ.

 ರಶ್ಯ ಜೊತೆಗಿನ ಶೀತಲ ಸಮರ ಕಾಲದ ಶಸ್ತ್ರಾಸ್ತ್ರ ಒಪ್ಪಂದವೊಂದರಿಂದ ಅಮೆರಿಕ ಹಿಂದೆ ಸರಿದ ದಿನಗಳ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

ಇಂಟರ್‌ಮೀಡಿಯಟ್ ನ್ಯೂಕ್ಲಿಯರ್ ಫೋರ್ಸಸ್ (ಐಎನ್‌ಎಫ್) ಒಪ್ಪಂದದಿಂದ ಅಮೆರಿಕ ಹಿಂದೆ ಸರಿದ ಬೆನ್ನಿಗೇ, ರಶ್ಯ ಕೂಡ ಅದರಿಂದ ಹೊರಬಂದಿದೆ.

‘‘ನಾವು ಅದಕ್ಕೆ ಬದ್ಧರಾಗಿದ್ದೇವೆ. ಯುರೋಪ್‌ನಲ್ಲಿ ಇಂಥ ಕ್ಷಿಪಣಿಗಳನ್ನು ಅಮೆರಿಕ ನಿಯೋಜಿಸದಿದ್ದರೆ ನಾವು ಕೂಡ ನಿಯೋಜಿಸುವುದಿಲ್ಲ’’ ಎಂದು ಅವರು ರಶ್ಯ-24 ಟಿವಿ ಚಾನೆಲ್‌ಗೆ ಹೇಳಿದ್ದಾರೆ ಎಂದು ಇಂಟರ್‌ಫ್ಯಾಕ್ಸ್ ಸುದ್ದಿ ಸಂಸ್ಥೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News