ಕೊಂಕಣಿ ಖಾರ್ವಿ ಸಮಾಜದಿಂದ ಸಮುದ್ರ ಪೂಜೆ

Update: 2019-08-18 17:47 GMT

ಕುಂದಾಪುರ, ಆ.18: ಕುಂದಾಪುರ ಕೊಂಕಣಿ ಖಾರ್ವಿ ಸಮಾಜದ ಪರವಾಗಿ ಶ್ರೀಮಹಾಕಾಳಿ ದೇವಳದ ವತಿಯಿಂದ ಇತ್ತೀಚೆಗೆ ಕೋಡಿ ಕಡಲ ಕಿನಾರೆಯಲ್ಲಿ ಸಾಂಪ್ರದಾಯಿಕವಾಗಿ ಸಮುದ್ರ ಪೂಜೆಯನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ದೇವಳದ ಅಧ್ಯಕ್ಷ ಪ್ರಕಾಶ್ ಆರ್.ಖಾರ್ವಿ, ಮಹಾಕಾಳಿ ಮಹಿಳಾ ಮಂಡಳಿಯ ವಸಂತಿ ಮೋಹನ್ ಸಾರಂಗ್, ಕಾರ್ಯಕ್ರಮ ಸಂಯೋಜಕ ಸುನೀಲ್ ಖಾರ್ವಿ ತಲ್ಲೂರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News