ದ.ಕ.: ನೆರೆ ಸಂತ್ರಸ್ತರಿಗೆ 24 ಲಕ್ಷ ಮೌಲ್ಯದ ಸಾಮಗ್ರಿ ಸಂಗ್ರಹ

Update: 2019-08-19 15:40 GMT

ಮಂಗಳೂರು, ಆ.19: ನೆರೆ ಸಂತ್ರಸತಿರಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ತೆರೆಯಲಾದ ಪರಿಹಾರ ಸಂಗ್ರಹ ಕೇಂದ್ರದಲ್ಲಿ ಸೋಮವಾರದವರೆಗೆ (ಆ.19) ಸುಮಾರು 24 ಲಕ್ಷ ರೂ. ಮೌಲ್ಯದ ನೆರವಿನ ಸಾಮಗ್ರಿಗಳು ಸಂಗ್ರಹವಾಗಿವೆ.

ಸುಮಾರು ಒಂದೂವರೆ ಲಕ್ಷ ರೂ. ಮೌಲ್ಯದ ಔಷಧಿ ಸೇರಿದಂತೆ ದಿನಬಳಕೆಯ ಸೊತ್ತುಗಳು ಈ ಸಂಗ್ರಹದಲ್ಲಿ ಸೇರಿದ್ದು, ಜಿಲ್ಲೆಗೆ ಬಳಕೆಯಾಗಿ ಉಳಿದವುಗಳನ್ನು ಹೊರ ಜಿಲ್ಲೆಗೆ ರವಾನಿಸುವ ಕಾರ್ಯಕ್ಕೆಸೋಮವಾರ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹಸಿರು ನಿಶಾನೆ ತೋರಿಸಿದರು.

ಕಳೆದ 10 ದಿನಗಳಿಂದ ಪರಿಹಾರ ಸಾಮಗ್ರಿಗಳು ನಾಡಿನ ಮೂಲೆ ಮೂಲೆಗಳಿಂದ ಸಂಗ್ರಹವಾಗಿದೆ. ಇದರ ಜತೆಯಲ್ಲಿ ಜಿಲ್ಲೆಯ ಸಂತ್ರಸ್ತರಿಗೆ ಈ ಸಾಮಗ್ರಿಗಳನ್ನು ವಿತರಿಸುವ ಕಾರ್ಯವೂ ನಡೆದಿದೆ. ಬಿಸ್ಕೆತ್ ಪ್ಯಾಕ್‌ನಿಂದ ಹಿಡಿದು ಅಕ್ಕಿ ಮೂಟೆಯವರೆಗೆ ಎಲ್ಲವನ್ನು ಲೆಕ್ಕ ಇಡಲಾಗಿದ್ದು, ಇದರ ಉಸುತಿವಾರಿಯನ್ನು ಮಂಗಳೂರು ಮಹಾನಗರಪಾಲಿಕೆಯ ಜಂಟೀ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದ, ಪ್ರಸ್ತುತ ಜಿಲ್ಲಾ ಸಣ್ಣ ಕೈಗಾರಿಕಾ ಕೇಂದ್ರದ ನಿರ್ದೇಶಕ ಗೋಕುಲ್ ದಾಸ್ ನಾಯಕ್ ಅವರಿಗೆ ವಹಿಸಲಾಗಿದೆ.

ಜಿಲ್ಲಾ ಆರೋಗ್ಯಾಧಿಕಾರಿ ನೇತೃತ್ವದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೂಲಕ ಔಷಧವನ್ನು ಸಂತ್ರಸತಿರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸಂಗ್ರಹ ಕೇಂದ್ರದ ಉಸ್ತುವಾರಿ ಗೋಕುಲ್‌ದಾಸ್ ನಾಯಕ್ ತಿಳಿಸಿದ್ದಾರೆ.

ಜಿಲ್ಲೆಯ ಪ್ರವಾಹಪೀಡಿತ ಪ್ರದೇಶದ ಸಂತ್ರಸತಿರಿಗೆ ನೆರವಿನ ಸಾಮಗ್ರಿಯನ್ನು ಈಗಾಗಲೇ ಸರಬರಾಜು ಮಾಡಲಾಗಿದೆ. ಬೆಳ್ತಂಗಡಿ ತಾಲೂಕಿನ ದುರಂತ ಸ್ಥಳಕ್ಕೆ ಇನ್ನಷ್ಟು ನೆರವಿನ ಸಾಮಗ್ರಿಗಳನ್ನು ತಲುಪಿಸುವ ಕೆಲಸ ನಡೆಸಲಿದೆ. ಉಳಿದ ಸಾಮಗ್ರಿಗಳನ್ನು ಉತ್ತರ ಕರ್ನಾಟಕದ ಪ್ರವಾಹಪೀಡಿತ ಪ್ರದೇಶದ ಸಂತ್ರಸ್ತರಿಗೆ ಕಳುಹಿಸಿಕೊಡಲಾಗುವುದು ಎಂದು ಗೋಕುಲ್‌ದಾಸ್ ನಾಯಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News