​ಬಿ.ವಿ.ಕಕ್ಕಿಲ್ಲಾಯ ಸ್ಮಾರಕ ರಕ್ತದಾನ ಶಿಬಿರ

Update: 2019-08-19 13:05 GMT

ಮಂಗಳೂರು, ಆ.19: ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಹಾಗೂ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ)ನ ಅವಿಭಜಿತ ದ.ಕ. ಜಿಲ್ಲಾ ಸಮಿತಿಗಳ ಆಶ್ರಯದಲ್ಲಿ ಸರಕಾರಿ ಲೇಡಿಗೋಶನ್ ಆಸ್ಪತ್ರೆ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಕಾರದೊಂದಿಗೆ ರವಿವಾರ ನಗರದ ಬಿ.ವಿ. ಕಕ್ಕಿಲ್ಲಾಯ ಭವನದಲ್ಲಿ ಕಾಮ್ರೇಡ್ ಬಿ.ವಿ.ಕಕ್ಕಿಲ್ಲಾಯ ಶತಾಬ್ದಿಯ ಅಂಗವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಜರುಗಿತು.

ಶಿಬಿರ ಉದ್ಘಾಟಿಸಿ ಮಾತನಾಡಿದ ಡಾ.ಬಿ. ಶ್ರೀನಿವಾಸ ಕಕ್ಕಿಲ್ಲಾಯ ‘ಇನ್ನೊಬ್ಬನ ಜೀವ ಉಳಿಸಲು ಒಬ್ಬ ವ್ಯಕ್ತಿ ತನ್ನ ರಕ್ತ ನೀಡುವುದರಿಂದ ರಕ್ತ ಪಡೆಯುವ ವ್ಯಕ್ತಿ ತನ್ನ ಜೀವವನ್ನು ಉಳಿಸಿಕೊಂಡರೆ ರಕ್ತ ನೀಡಿದ ವ್ಯಕ್ತಿ ತನ್ನ ಆರೋಗ್ಯವನ್ನು ವೃದ್ಧಿಸಿಕೊಳ್ಳುತ್ತಾನೆ. ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಸಾವಿನಿಂದ ರಕ್ಷಿಸಲು, ಸಾಮಾಜಿಕ ಬದ್ಧತೆಯನ್ನು ಮೆರೆಯಲು ಓರ್ವ ನಾಗರಿಕನಿಗೆ ಸಿಗುವ ಅವಕಾಶವಾಗಿದೆ. ಆದುದರಿಂದ ಜಾತಿ ಧರ್ಮ ಮರೆತು ರಕ್ತದಾನ ಮಾಡಿ ಮಾನವ ಧರ್ಮವನ್ನು ಉಳಿಸಬೇಕಿದೆ ಎಂದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ವೈದ್ಯ ಡಾ. ಅಶುತೋಷ್ ಕುಮಾರ್ ಗುಪ್ತ, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಎಚ್. ವಿ.ರಾವ್, ಸಮದರ್ಶಿ ವೇದಿಕೆಯ ಕಲ್ಲೂರು ನಾಗೇಶ್ ರಕ್ತದಾನದ ಬಗ್ಗೆ ಮಾಹಿತಿ ನೀಡಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧಿಕಾರಿಗಳಾದ ಪ್ರಭಾಕರ್ ಶರ್ಮ, ಪ್ರವೀಣ್ ಕುಮಾರ್, ರವೀಂದ್ರನಾಥ್ ಉಚ್ಚಿಲ್ ಸಿಪಿಐ ಹಾಗೂ ಎಐಟಿಯುಸಿ ನಾಯಕರಾದ ವಿ.ಎಸ್. ಬೇರಿಂಜ, ಬಿ. ಶೇಖರ್,ಎಂ.ಕರುಣಾಕರ್, ಆರ್.ಡಿ. ಸೋನ್ಸ್, ಎ.ಪಿ. ರಾವ್, ಸುರೇಶ್ ಕುಮಾರ್, ತಿಮ್ಮಪ್ಪಕಾವೂರು, ಸುಧಾಕರ್ ಕೆ., ಕೃಷ್ಣಪ್ಪವಾಮಂಜೂರು, ಬಿ.ಕೆ. ಜಗತ್,ಕೆ. ಆಶೀರ್ವಾದ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News