ಪ್ರವಾಹ ಪೀಡಿತ ಪ್ರದೇಶಗಳಿಗೆ ಜಮಾಅತೆ ಇಸ್ಲಾಮೀ ಹಿಂದ್ ನಿಯೋಗ ಭೇಟಿ

Update: 2019-08-19 14:57 GMT

ಉಡುಪಿ, ಆ.19: ರಾಜ್ಯದ ವಿವಿಧೆಡೆ ಸಂಭವಿಸಿದ ಪ್ರೃವಾಹ ಪೀಡಿತ ಪ್ರದೇಶ ಗಳಿಗೆ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ನಿಯೋಗವು ಭೇಟಿ ನೀಡಿ, ನೆರೆ ಸಂತ್ರಸ್ತರ ಅವಹಾಲುಗಳನ್ನು ಸ್ವೀಕರಿಸಿ ಸಾಂತ್ವನ ನೀಡಿದೆ.

ಈ ಸಂದರ್ಭದಲ್ಲಿ ನಿಯೋಗವು ಸಂತ್ರಸ್ತರಿಗೆ ತುರ್ತು ಪರಿಹಾರ ನೀಡಿದೆ. ಜಮಾಅತ್‌ನ ಸೇವಾ ವಿಭಾಗ ಹುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ ತಂಡ ಮೊದಲ ದಿನದಿಂದಲೇ ಪ್ರವಾಹ ಪೀಡಿತರ ರಕ್ಷಣಾ ಕಾರ್ಯದಲ್ಲ್ಲಿ ತೊಡಗಿಸಿಕೊಂಡಿದ್ದು, ನೆರೆ ಸಂತ್ರಸ್ತರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು, ಬಟ್ಟೆಬರೆ, ಆಹಾರ ಸಾಮಾಗ್ರಿಗಳು ಹಾಗೂ ಇನ್ನಿತರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿದೆ.

ಪ್ರವಾಹದಿಂದ ಕೆಸರುಮಯಗೊಂಡ ನೂರಾರು ಮನೆಗಳನ್ನು ಕಾರ್ಯ ಕರ್ತರು ಶುಚಿಗೊಳಿಸಿದರು. ಪ್ರವಾಹದಿಂದ ಹಾನಿಗೊಂಡವರ ಅಗತ್ಯ ದಾಖಲೆ ಪತ್ರಗಳನ್ನು ಸರಿಪಡಿಸಲು, ಕಾನೂನು ಸಲಹೆ ನೀಡಲು, ಸರಕಾರದಿಂದ, ದಾನಿಗಳಿಂದ, ಸ್ವಯಂಸೇವಾ ಸಂಸ್ಥೆಗಳಿಂದ ದೊರೆಯುವ ಪರಿಹಾರವನ್ನು ತಲುಪಿಸುವ ಮತ್ತು ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಕೊಡಗಿನ ಸಿದ್ಧಾಪುರ, ಬೆಳಗಾವಿಯ ರಾಮದುರ್ಗ, ಬಾಗಲಕೋಟೆಯ ಬಾದಾಮಿಯಲ್ಲಿ ರಿಲೀಫ್ ಸೆಲ್‌ಗಳನ್ನು ತೆರೆಯಲಾಗಿದೆ. ಇಂತಹ ಸೆಲ್‌ಗಳನ್ನು ರಾಜ್ಯದ ಇನ್ನಿತರ ಪ್ರವಾಹ ಪೀಡಿತ ಪ್ರೃದೇಶಗಳಲ್ಲಿ ಶೀಘ್ರವೇ ತೆರೆಯಲಾಗುವುದೆಂದು ಎಚ್‌ಆರ್‌ಎಸ್ ಪ್ರೃಧಾನ ಕಾರ್ಯದರ್ಶಿ ಮುಹಮ್ಮದ್ ಮರಕಡ ತಿಳಿಸಿದ್ದಾರೆ.

ಪ್ರೃವಾಹದಿಂದ ಮನೆ ಕಳಕೊಂಡ ಸಂತ್ರುಸ್ತರಿಗೆ ಸರಕಾರವು ಆದಷ್ಟು ಬೇಗನೆ ಮನೆ ನಿರ್ಮಿಸಿಕೊಟ್ಟು ಅವರಲ್ಲಿ ಧೈರ್ಯ ತುಂಬಬೇಕೆಂದು ನಿಯೋಗವು ಸರಕಾರವನ್ನು ಒತ್ತಾಯಿಸಿದೆ. ಇಂತಹ ಪ್ರೃವಾಹದಿಂದ ಮುಂದೆ ಪ್ರಾಣಹಾನಿ ಮತ್ತು ನಾಶ ನಷ್ಟಗಳು ಮರುಕಳಿಸದಂತೆ ಅಧ್ಯಯನ ನಡೆಸಿ ಸೂಕ್ತ ಕ್ರೃಮಗಳನ್ನು ಕೈಗೊಳ್ಳಬೇಕೆಂದು ನಿಯೋಗ ಆಗ್ರಹಿಸಿದೆ.

ಈ ನಿಯೋಗದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಉಪಾಧ್ಯಕ್ಷ ಮುಹಮ್ಮದ್ ಯೂಸುಫ್ ಕನ್ನಿ, ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News