ಕೊಡವೂರು: ಕೃಷ್ಣವೇಷ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

Update: 2019-08-19 15:07 GMT

ಉಡುಪಿ, ಆ.19: ಮಕ್ಕಳು ದೇವರಿಗೆ ಸಮಾನ, ಚಿಕ್ಕ ಮಕ್ಕಳಲ್ಲಿ ದೈವತ್ವ ಕಾಣಬೇಕು ಎಂದು ಕರ್ನಾಟಕ ಬ್ಯಾಂಕ್ ಉಡುಪಿಯ ಕ್ಷೇತ್ರೀಯ ಸಹಾಯಕ ಮಹಾ ಪ್ರಬಂಧಕ ಬೆಳ್ಳೆ ಗೋಪಾಲಕೃಷ್ಣ ಸಾಮಗ ಹೇಳಿದ್ದಾರೆ.

ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಕೊಡವೂರು ಶ್ರೀಶಂಕರನಾರಾಯಣ ದೇವಳದಲ್ಲಿ ರವಿವಾರ ಆಯೋಜಿಸಲಾದ ಕೃಷ್ಣವೇಷ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡುತ್ತಿದ್ದರು.

ಇತಿಹಾಸ ಪುರಾಣಗಳಿಂದ ನಾವು ಕಲಿಯುವುದ ಬಹಳಷ್ಟಿದೆ. ಆ ದಿಸೆಯಲ್ಲಿ ಚಿಕ್ಕ ಮಕ್ಕಳಲ್ಲಿ ಎಳೆವೆಯಿಂದಲೆ ಕೃಷ್ಣ ಭಕ್ತಿಯನ್ನು ಜಾಗೃತಗೊಳಿಸಲು, ಮಕ್ಕಳಲ್ಲಿ ಹುದುಗಿರುವ ಸೂಕ್ತ ಪ್ರತಿಭೆಯನ್ನು ವ್ಯಕ್ತಪಡಿಸಲು ಸೂಕ್ತ ವೇದಿಕೆ ಕಲ್ಪಿಸಿಕೊಡ ಬೇಕು ಎಂದರು.

ಮುದ್ದುಕೃಷ್ಣ ವಿಭಾಗದಲ್ಲಿ ಪ್ರ-ಆದ್ಯ ಪಿ.ಕರ್ಕೇರಾ, ದ್ವಿ-ತನಿಷ್ ದೇವಾಡಿಗ, ತೃ-ರುತ್ವಿಕ್ ವಿನೋದ್, ಬಾಲಕೃಷ್ಣ ವಿಭಾಗದಲ್ಲಿ ಪ್ರ-ಆರಾಧ್ಯ ಸಾಲಿಯಾನ್, ದಿ-ಪರ್ಣಿಕಾ ಆಚಾರ್ಯ, ತೃ-ಮಹಿಮ ಸಂತೋಷ್ ಕೋಟ್ಯಾನ್, ಕಿಶೋರ ಕೃಷ್ಣ ವಿಭಾಗದಲ್ಲಿ ಪ್ರ-ಪ್ರತ್ಯೂಷ್ ನಾಯಕ್, ದ್ವಿ-ಕೃತಿ ಜೆ.ಅಮೀನ್, ತೃ- ಗ್ಯಾನ್, ರಾಧಾಕೃಷ್ಣ ವಿಭಾಗದಲ್ಲಿ ಪ್ರ-ತನ್ವಿ ಕಾಂಚನ್ ಮತ್ತು ಸೋಹನಾ ಶಂಕರ್, ದ್ವೀ- ಪ್ರಗತಿ ಮತ್ತು ಗೌರಿ_ಶ್ರಾವ್ಯ ವಿ.ಸಾಲಿಯಾನ್, ತೃ- ವರಾಲಿ ಮತ್ತು ಸ್ವಸ್ತಿ ಬಹುಮಾನ ಪಡೆದರು.

ಆಡಳಿತ ಮಂಡಳಿ ಸದಸ್ಯ ರಾಜ ಸೇರಿಗಾರ, ಬೇಬಿ ಮೆಂಡನ್ ಹಾಗು ಬಾಬಾ ಕೆ. ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಗೀತಂ ಗಿರೀಶ್ ಮತ್ತು ಅಮಿತಾಂಜಲಿ ಕಿರಣ್ ಸಹಕರಿಸಿದರು.

ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಸ್ವಾಗತಿಸಿ ದರು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು. ಆನನಿ ಭಾಸ್ಕರ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕ ಜನಾರ್ದನ್ ಕೊಡವೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News