ಪಾದುವ ಕಾಲೇಜು: ರಕ್ತದಾನ ಶಿಬಿರ

Update: 2019-08-19 17:20 GMT

ಮಂಗಳೂರು: ಪಾದುವ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ ಇದರ ರಾಷ್ಟ್ರೀಯ ಸೇವಾ ಸಂಘ, ಹಳೆಯ ವಿಧ್ಯಾರ್ಥಿಗಳ ಸಂಘ, ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಜೆಸಿಐ ಮಂಗಳೂರು ಲಾಲಭಾಗ್, ಹಾಗೂ ಲಯನ್ಸ್ ಕ್ಲಬ್ ಮಂಗಳೂರು, ಇವರ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರವನ್ನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು.

ವೆನ್ಲಾಕ್ ಆಸ್ಪತ್ರೆಯ ಬ್ಲಡ್ ಬ್ಯಾಂಕಿನ ಅಧಿಕಾರಿ ಹಾಗೂ ಹಿರಿಯ ವೈದ್ಯಕೀಯ ತಜ್ಞರಾದ ಡಾ. ಶರತ್ ಕುಮಾರ್ ರಾವ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ವಿಧ್ಯಾರ್ಥಿಗಳ ಬಳಿ‌ ಮಾತಾಡುತ್ತಾ, ಬೇರೆ ಬೇರೆ ರಕ್ತದ ಗುಂಪಿನ‌ ಬಗ್ಗೆ ಮಾಹಿತಿ ನೀಡಿ, ರಕ್ತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿದರು. ನಮ್ಮ ಜೀವದಲ್ಲಿ ಹೆಚ್ಚಿನ‌ ಪ್ರಮಾಣದ ರಕ್ತ ಇರುವುದರಿಂದ, ರಕ್ತವನ್ನು ದಾನ ಮಾಡುವುದರಿಂದ ಹೆಚ್ಚೇನು ಹಾನಿಯಾಗುವುದಿಲ್ಲ ಎಂದು ವಿವರಿಸಿದರು. 

ವೇದಿಕೆಯಲ್ಲಿ ಕಾಲೇಜು ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ.‌ಲವಿತ್ ರಾಜ್, ಜೆಸಿಐ ಲಾಲಭಾಗ್ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ. ಡೀನತ್ ಡೇಸಾ, ಉಪಪ್ರಾಂಶುಪಾಲರಾದ ಶ್ರೀ. ರೋಶನ್ ಸಾಂತುಮಾಯರ್, ರಾಷ್ಟ್ರೀಯ ಸೇವಾ ಯೋಜನೆಯ ಘಟಕ ನಾಯಕಿಯಾದ ಮಂಜುಳಾ, ಲಯನ್ಸ್ ಕ್ಲಬ್ ಇದರ ಅಧ್ಯಕ್ಷೆಯಾದ ಫ್ಲಾವಿಯಾ ಪಿಂಟೊ, ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೆಲ್ಸ್ಟನ್ ಹಾಜರಿದ್ದರು. ಈ ಶಿಬಿರದಲ್ಲಿ 88 ಮಂದಿ ರಕ್ತದಾನವನ್ನು ಮಾಡಿ ಶಿಬಿರವನ್ನು ಯಶಸ್ವಿಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News